HomeMovieಜುಲೈ 15ಕ್ಕೆ ಬಹುನಿರೀಕ್ಷಿತ ಚೇಸ್ ಸಿನೆಮಾ ತೆರೆಗೆ: ಟಿಕೆಟ್ ಬುಕಿಂಗ್ ಆರಂಭ

ಜುಲೈ 15ಕ್ಕೆ ಬಹುನಿರೀಕ್ಷಿತ ಚೇಸ್ ಸಿನೆಮಾ ತೆರೆಗೆ: ಟಿಕೆಟ್ ಬುಕಿಂಗ್ ಆರಂಭ

ತನ್ನ ಹಾಡುಗಳು ಹಾಗು ಟೀಸರಿನಿಂದ ಕುತೂಹಲ ಹಾಗು ನಿರೀಕ್ಷೆ ಹೆಚ್ಚಿಸಿರುವ ಚೇಸ್ ಸಿನೆಮಾ ಮುಂದಿನ ತಿಂಗಳ 15ರಂದು (ಜುಲೈ 15) ತೆರೆಗೆ ಬರಲಿದೆ. ಈ ಬಗ್ಗೆ ಸಿನೆಮಾ ತಂಡ ಅಧಿಕೃತವಾಗಿ ಪ್ರಕಟಿಸಿದೆ. ಕೋವಿಡ್ ಕಾರಣಗಳಿಂದ ಹಾಗು ನಂತರ ಹಲವು ಸಿನೆಮಾಗಳ ಸಾಲು ಸಾಲು ಬಿಡುಗಡೆಯ ಕಾರಣ ತಡವಾಗಿದ್ದ ಚೇಸ್ ಈ ಮಾನ್ಸೂನ್’ನ ಥಂಡಿ ವಾತಾವರಣದಲ್ಲಿ ಬೆಚ್ಚಗೆಯ ಭಾವ ಮೂಡಿಸಲು ಬರುತ್ತಿದೆ.

ಸೀಟ್ ಎಡ್ಜ್ ಥ್ರಿಲರ್ ಆಗಿರುವ ಚೇಸ್ ಸಿನೆಮಾದಲ್ಲಿ ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅವಿನಾಶ್ ದಿವಾಕರ್, ಕಿರುತೆರೆಯಲ್ಲಿ ಹೆಸರು ಮಾಡಿರುವ ಅರ್ಜುನ್ ಯೋಗಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಕರಾವಳಿಯ ಹಾಸ್ಯ ದಿಗ್ಗಜ ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ಬಾಲಿವುಡ್ ಖ್ಯಾತಿಯ ಸುಶಾಂತ್ ಪೂಜಾರಿ, ವೀಣಾ ಸುಂದರ್, ಸುಧಾ ಬೆಳವಾಡಿ, ಸುಂದರ್ ವೀಣಾ ಮುಂತಾದ ಮೇರು ಕಲಾವಿದರ ದಂಡೇ ಇದೆ.

ವಿಲೋಕ್ ಶೆಟ್ಟಿ ನಿರ್ದೇಶನ, ಅನಂತ್ ಅರಸ್ ಛಾಯಾಗ್ರಹಣ, ಕ್ರೇಜಿ ಮೈಂಡ್ಸ್ ಸಂಕಲನ, ಕಾರ್ತಿಕ್ ಆಚಾರ್ಯ ಸಂಗೀತ, ಉಮೇಶ್ ಪಿಲಿಕುಡೇಲು ಸಾಹಿತ್ಯ ಇರುವ ಚೇಸ್ ಸಿನೆಮಾವನ್ನು ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಿಸಿದ್ದಾರೆ.

ಮಂಗಳೂರು, ಬೆಂಗಳೂರು ಸೇರಿದಂತೆ ಈಗಾಗಲೇ ಪ್ರಮುಖ ನಗರಗಳಲ್ಲಿ ‘ಬುಕ್ ಮೈ ಷೋ’ ಮೂಲಕ ಟಿಕೆಟ್ ಬುಕಿಂಗ್ ಆರಂಭವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments