HomeMovieರಜಿನಿಕಾಂತ್ 'ಅಣ್ಣಾತೆ' ಫರ್ಸ್ಟ್ ಲುಕ್ ಬಿಡುಗಡೆ: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್

ರಜಿನಿಕಾಂತ್ ‘ಅಣ್ಣಾತೆ’ ಫರ್ಸ್ಟ್ ಲುಕ್ ಬಿಡುಗಡೆ: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಅಣ್ಣಾತೆ ಸಿನೆಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಭಾರೀ ಟ್ರೆಂಡಿಂಗ್ ಆಗಿದೆ. ಇದು ತಲೈವಾ ರಜಿನಿಕಾಂತ್ ಅವರ 168ನೇ ಸಿನೆಮಾವಾಗಿದೆ.

ಫಸ್ಟ್ ಲುಕ್’ನಲ್ಲಿ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ರಜಿನಿಕಾಂತ್ ಬರುವ ದೃಶ್ಯ ಅದ್ಭುತವಾಗಿ ಮೂಡಿ ಬಂದಿದೆ. ಒಂದು ಕೈಯಲ್ಲಿ ಬೈಕ್ ಹ್ಯಾಂಡಲ್, ಮತ್ತೊಂದು ಕೈಯಲ್ಲಿ ಉದ್ದದ ಲಾಂಗ್ ಹಿಡಿದುಕೊಂಡಿರುವ ರಜಿನಿ ಮಾಸ್ ಲುಕ್ ಸಿನಿ ರಸಿಕರಿಗೆ ಇಷ್ಟವಾಗುವಂತಿದೆ. ಮತ್ತೊಂದು ದೃಶ್ಯದಲ್ಲಿ ರೋಷಗೊಂಡಿರುವ ರಜಿನಿಕಾಂತ್ ಸ್ಟೈಲಿಶ್ ಆಗಿ ನಡೆದು ಸಾಗುತ್ತಿರುವ ಸನ್ನಿವೇಶವಿದೆ.

ಸನ್ ಪಿಚ್ಚರ್ಸ್ ಬ್ಯಾನರ್’ನಲ್ಲಿ ಕಲಾನಿಧಿ ಮಾರನ್ ನಿರ್ಮಾಣದಲ್ಲಿ ‘ಅಣ್ಣಾತೆ’ ಸಿನೆಮಾ ನಿರ್ಮಾಣವಾಗಿದ್ದು ಶಿವ ಅವರು ನಿರ್ದೇಶನ ಮಾಡಿದ್ದಾರೆ. ಮೀನಾ, ನಯನತಾರ, ಖುಶ್ಬೂ, ಕೀರ್ತಿ ಸುರೇಶ್ ಸೇರಿದಂತೆ ಬಹುದೊಡ್ಡ ನಾಯಕಿಯರ ದಂಡೇ ಅಣ್ಣಾತೆ ಚಿತ್ರದಲ್ಲಿದೆ. ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಯ್, ವೇಲ ರಾಮಮೂರ್ತಿರಂತಹ ಘಟಾನುಘಟಿ ನಟರು ಅಣ್ಣಾತೆ ಸಿನೆಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಸಿನೆಮಾವನ್ನು ಈ ವರ್ಷದ ದೀಪಾವಳಿಗೆ ಬಿಡುಗಡೆಗೊಳಿಸುವುದಾಗಿ ಈ ಹಿಂದೆ ಸನ್ ಪಿಚ್ಚರ್ಸ್ ಸಂಸ್ಥೆ ಹೇಳಿಕೊಂಡಿತ್ತು. ಆ ಮಾತನ್ನು ಫರ್ಸ್ಟ್ ಲುಕ್’ನಲ್ಲಿ ಕೂಡ ಸನ್ ಪಿಚ್ಚರ್ಸ್ ಕಾಯ್ದುಕೊಂಡಿದೆ.

ಎಲ್ಲ ಅಂದುಕೊಂಡಂತೆ ಕೊರೋನಾ ಪ್ರಭಾವ ಅಡ್ಡಿಪಡಿಸದೆ ಇದ್ದಲ್ಲಿ ಈ ದೀಪಾವಳಿಗೆ ರಜಿನಿಕಾಂತ್ ಅವರನ್ನು ತೆರೆ ಮೇಲೆ ನೋಡಿ ಆನಂದಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments