Movie

ಧೈರ್ಯದಿಂದ ಮುನ್ನುಗ್ಗು ನಿನ್ನ ಹಿಂದೆ ನಾನಿದ್ದೇನೆ ಎಂದು ರಿಷಬ್ ಶೆಟ್ಟಿಗೆ ದೈವದ ಅಭಯ

ಮಂಗಳೂರು: ನಟ ರಿಷಬ್ ಶೆಟ್ಟಿ ಮಂಗಳೂರು ವಜ್ರದೇಹಿ ಮಠದ ದೈವ ಕೋಲಕ್ಕೆ ಭೇಟಿ ನೀಡಿದ್ದಾರೆ. ಕಾಂತಾರ ಪ್ರೀಕ್ವೆಲ್ ಬಗ್ಗೆ ಕೂಡ ದೈವ ರಿಷಬ್ ಅವರಿಗೆ ಧೈರ್ಯ ತುಂಬಿದೆ. ಬಿಗ್ ಬಜೆಟ್ನಲ್ಲಿ ಕಾಂತಾರ ಪ್ರೀಕ್ವೆಲ್ ಸಿನಿಮಾ ಮಾಡ್ತಿರುವ ರಿಷಬ್ ಗೆ ಧೈರ್ಯ ಕಳೆದುಕೊಳ್ಳದಂತೆ ದೈವ ತಿಳಿಸಿದೆ. ಕಾಂತಾರ ರೀತಿಯಲ್ಲೇ ರಿಷಬ್ ಶೆಟ್ಟಿಗೆ  ದೈವದ ಅಭಯ ನೀಡಿದೆ. ಏನೇ ಸಮಸ್ಯೆ ಬಂದ್ರು ಕುಗ್ಗಬೇಡಿ ಎಂದು ರಿಷಬ್ ಅವರಿಗೆ ಸೂಚನೆ ಕೊಟ್ಟಿದೆ.

‘ಕಾಂತಾರ’ ಚಿತ್ರ ಯಶಸ್ವಿಯಾದ ಬೆನ್ನಲ್ಲೇ, ಕಾಂತಾರ ಪಾರ್ಟ್ 2 ಮಾಡಲು ರಿಷಬ್ ಶೆಟ್ಟಿ ಟೀಮ್‌ ದೈವದ ಮುಂದೆ ಅನುಮತಿಯನ್ನು ಕೇಳಿಕೊಂಡಿದ್ದಾರೆ. ‘ಕಾಂತಾರ ಪಾರ್ಟ್ 2 ಸಿನಿಮಾ ಮಾಡಲು ವೀರೇಂದ್ರ ಹೆಗ್ಗಡೆ ಅವರ ಅನುಮತಿ ಕೇಳುವಂತೆ ದೈವ ನುಡಿದಿದೆ’. ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ಹೇಳಿದೆಯಂತೆ. ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ. ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ‌ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ಹೇಳಿದೆ. ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಯಾವುದೆ ಚ್ಯುತಿಯಾಗದಂತೆ ಎಚ್ಚರಿಕೆವಹಿಸಲು ದೈವ ನುಡಿಕೊಟ್ಟಿದೆ’ ಎಂದು ದೈವ ನರ್ತಕ ಉಮೇಶ್ ಪಂಬದ ತಿಳಿಸಿದ್ದಾರೆ.

Exit mobile version