ಕನ್ನಡಿಗ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಡಿಸೆಂಬರ್ 22 ರಂದು ಬಿಡುಗಡೆಯಾದ ಬಹು ನಿರೀಕ್ಷಿತ ತೆಲುಗು ಮೂಲ ಚಿತ್ರವು ಮೊದಲ ದಿನವೇ ಗಲ್ಲಾಪೆಟ್ಟಿಗೆಯನ್ನು ಧೂಳಿಪಟ ಮಾಡಿದೆ. ಇದು ಆದಿಪುರುಷ, ಜವಾನ್, ಅನಿಮಲ್ ಮತ್ತು ಇತರ ಚಲನಚಿತ್ರಗಳು ಮಾಡಿದ ಹಲವಾರು ದಾಖಲೆಗಳನ್ನು ಪುಡಿಗಟ್ಟಿದೆ.

2023 ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತಿದೊಡ್ಡ ಓಪನಿಂಗ್‌ಗಳನ್ನು ದಾಖಲಿಸಿದ ಟಾಪ್ 5 ಭಾರತೀಯ ಚಲನಚಿತ್ರಗಳನ್ನು ನೋಡೋಣ.
1) ಸಲಾರ್: ಪ್ರಶಾಂತ್ ನೀಲ್ ನಿರ್ದೇಶನದ ತೆಲುಗು ಚಿತ್ರ ಸಲಾರ್ 2023 ರ ಅತಿದೊಡ್ಡ ಭಾರತೀಯ ಓಪನರ್ ಆಗಿ ಹೊರಹೊಮ್ಮಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 95 ಕೋಟಿ ಮೌಲ್ಯದ ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 175 ಕೋಟಿ ಮೌಲ್ಯದ ಕಲೆಕ್ಷನ್ ಮಾಡಿ 2023ರ ಅತಿದೊಡ್ಡ ಮೊದಲ ದಿನದ ಕಲೆಕ್ಷನ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
2) ಆದಿಪುರುಷ: ಸಲಾರ್‌ನ ನಂತರ ಓಂ ರಾವುತ್ ಅವರ ಚಿತ್ರ, ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ಆದಿಪುರುಷ. ಹೆಚ್ಚು ವಿವಾದಾತ್ಮಕ ಚಿತ್ರ ಆದಿಪುರುಷ ಬಾಕ್ಸ್ ಆಫೀಸ್‌ನಲ್ಲಿ 89 ಕೋಟಿ ಮೌಲ್ಯದ ಬಾಕ್ಸ್ ಓಪನಿಂಗ್ ಮಾಡಿ 2023 ರ ಎರಡನೇ ಅತಿದೊಡ್ಡ ಓಪನರ್ ಆಯಿತು.
3) ಜವಾನ್: 3ನೇ ಸ್ಥಾನದಲ್ಲಿ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರವಿದೆ. ಅಟ್ಲಿ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಜೊತೆಗೆ ಎಸ್‌ಆರ್‌ಕೆ ನಟಿಸಿದ್ದಾರೆ. ಆಕ್ಷನ್-ಥ್ರಿಲ್ಲರ್ 75 ಕೋಟಿ ಮೌಲ್ಯದ ಬಾಕ್ಸ್ ಆಫೀಸ್ ಓಪನಿಂಗ್ ದಾಖಲಿಸಿ 2023ರ 3 ನೇ ಅತಿದೊಡ್ಡ ಓಪನರ್ ಆಯಿತು.
4) ಲಿಯೋ: 4 ನೇ ಸ್ಥಾನದಲ್ಲಿ ಲೋಕೇಶ್ ಕನಕರಾಜ್ ಅವರ ಜನಪ್ರಿಯ ತಮಿಳು ಚಿತ್ರ ಲಿಯೋ ಇದೆ. ಸಂಜಯ್ ದತ್ ಮತ್ತು ತ್ರಿಶಾ ಕೃಷ್ಣನ್ ಜೊತೆಯಲ್ಲಿ ವಿಜಯ್ ತಲಪತಿ ನಟಿಸಿದ ಈ ಚಿತ್ರವು 66 ಕೋಟಿ ಮೌಲ್ಯದ ಬಾಕ್ಸ್ ಆಫೀಸ್ ಓಪನಿಂಗ್ ಅನ್ನು ದಾಖಲಿಸಿ 2023ರ 4 ನೇ ಅತಿದೊಡ್ಡ ಓಪನರ್ ಆಯಿತು.
5) ಅನಿಮಲ್: ಅರ್ಜುನ್ ರೆಡ್ಡಿ ವಂಗಾ ಅವರ ಚಿತ್ರ ಅನಿಮಲ್. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಕಪೂರ್ ಜೊತೆಗೆ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಅನಿಮಲ್ 63.80 ಕೋಟಿ ಮೌಲ್ಯದ ಬಾಕ್ಸ್ ಆಫೀಸ್ ಓಪನಿಂಗ್ ಗಳಿಸಿ 2023ರ 5ನೇ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿದೆ.
ಅನಿಮಲ್ ನಂತರ 6ನೇ ಸ್ಥಾನದಲ್ಲಿ SRK ಅಭಿನಯದ ಪಠಾನ್, 7ನೇ ಸ್ಥಾನದಲ್ಲಿ ಜೈಲರ್, 8ನೇ ಸ್ಥಾನದಲ್ಲಿ ಟೈಗರ್ 3, 9ನೇ ಸ್ಥಾನದಲ್ಲಿ ಗದರ್ 2 2023 ರ ಅತಿದೊಡ್ಡ ಬಾಕ್ಸ್ ಆಫೀಸ್ ಆರಂಭಿಕ ಗಳಿಕೆ ಪಟ್ಟಿಯಲ್ಲಿ ಇದೆ.












































