HomeMovieಅವತಾರ ಪುರುಷನಾಗಿ ಶರಣ್: ಡಿಸೆಂಬರ್ 10ರಿಂದ ಚಿತ್ರಮಂದಿರಗಳಲ್ಲಿ

ಅವತಾರ ಪುರುಷನಾಗಿ ಶರಣ್: ಡಿಸೆಂಬರ್ 10ರಿಂದ ಚಿತ್ರಮಂದಿರಗಳಲ್ಲಿ

ಕನ್ನಡ ನಟ ಶರಣ್ ಅವರ ಕೊನೆಯ ಚಿತ್ರ ಅಧ್ಯಕ್ಷ ಇನ್ ಅಮೇರಿಕ ಬಿಡುಗಡೆಯಾಗಿ ಸರಿ ಸುಮಾರು ಎರಡು ವರ್ಷಗಳ ನಂತರ ಮತ್ತೆ ಚಿತ್ರಮಂದಿರಕ್ಕೆ ಬರಲು ಶರಣ್ ಸಜ್ಜಾಗಿದ್ದಾರೆ. ಈ ಬಾರಿ ಹೊಸ ಅವತಾರ ಎತ್ತಿರುವ ಶರಣ್ ‘ಅವತಾರ ಪುರುಷ’ನಾಗಿ ಪ್ರೇಕ್ಷಕರನ್ನು ರಂಜಿಸಲು ಬರಲಿದ್ದಾರೆ. ಶರಣ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರ ಮುಂದಿನ ತಿಂಗಳ (ಡಿಸೆಂಬರ್)10ರಂದು ಬಿಡುಗಡೆಯಾಗಲಿದೆ.

ಶರಣ್ ಚಿತ್ರಗಳೆಂದರೆ ಅಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಇಲ್ಲೂ ಅದಕ್ಕೆ ಮೋಸವಿಲ್ಲ. ಈಗಾಗಲೇ ಚಿತ್ರದ ಟ್ರೈಲರ್ ಹಿಟ್ ಆಗಿದ್ದು ಕುತೂಹಲ ಮೂಡಿಸುವಂತಿದೆ. ಶರಣ್ ಅವರೇ ಹೇಳುವಂತೆ ಇದು ಶರಣ್ ಸಿನಿ ಪಯಣದ ಅತೀ ದೊಡ್ಡ ಬಜೆಟ್ ಚಿತ್ರವೂ ಹೌದು. ಶರಣ್ ಯಶಸ್ವೀ ಜೋಡಿ ಆಶಿಕಾ ರಂಗನಾಥ್ ಇಲ್ಲಿ ಮತ್ತೆ ನಾಯಕಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಯಿಕುಮಾರ್, ಸುಧಾರಾಣಿ, ಅಶುತೋಷ್ ರಾಣಾ ಸೇರಿದಂತೆ ದೊಡ್ಡ ನಂತರ ದಂಡೇ ಈ ಚಿತ್ರದಲ್ಲಿದೆ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾದರೆ ಎರಡನೆಯ ಭಾಗವು ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ 101 ದಿನ ಆದ ಬಳಿಕ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments