Movie

ತಮಿಳು ಚಿತ್ರರಂಗದ ಖ್ಯಾತ ನಟ, ಡಿಎಂಡಿಕೆ ಸ್ಥಾಪಕ ಕ್ಯಾ.ವಿಜಯ್ ಕಾಂತ್ ಕೊರೋನಾ ಸೋಂಕಿನಿಂದ ಸಾವು

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಡಿಎಂಡಿಕೆ ಪಕ್ಷದ ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್​ ಅವರು ಕೊರೊನಾ ಸೋಂಕಿನಿಂದಾಗಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ತೀವ್ರವಾದ ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ ವಿಜಯಕಾಂತ್ ಅವರನ್ನು ಕಳೆದ ತಿಂಗಳು ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.

ಗುಣಮುಖರಾದ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮನೆಯಲ್ಲೇ ಇದ್ದ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ವಿಜಯಕಾಂತ್ 154ಕ್ಕೂ ಹೆಚ್ಚು ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ನಂತರ ಅವರು ರಾಜಕಾರಣಿಯಾಗಿ ಸ್ವಂತ ಪಕ್ಷ ಕಟ್ಟಿ ಬೆಳೆಸಿದ್ದರು. ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ‘ಯಜಮಾನ’ (ವಿಷ್ಣುವರ್ಧನ್ ನಟನೆಯ) ತಮಿಳಿನ ವಿಜಯಕಾಂತ್ ಅವರ ಸಿನೆಮಾದ ರಿಮೇಕ್ ಆಗಿತ್ತು ಅನ್ನುವುದು ವಿಶೇಷ.

Exit mobile version