HomeNationalಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ, ಊಟದ ಖರ್ಚು ಪೂರ್ತಿ ಭರಿಸುವ...

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ, ಊಟದ ಖರ್ಚು ಪೂರ್ತಿ ಭರಿಸುವ ರೆಬೆಲ್ ಸ್ಟಾರ್‌

ಅಯೋಧ್ಯೆ: ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ,  ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.  ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ  ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ  ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ. ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಟ ಊಟಕ್ಕೆ ಹಣವನ್ನು ನೀಡುತ್ತಿದ್ದಾರೆ.

ಪ್ರಭಾಸ್ ಅತ್ಯಂತ ಜನಪ್ರಿಯ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮಿಗಿಲಾಗಿ ಅನೇಕ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ.  ರೆಬೆಲ್ ಸ್ಟಾರ್ ಕೃಷ್ಣಂ ರಾಜು ಮತ್ತು ಅವರ ಉತ್ತರಾಧಿಕಾರಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಸಹನಟರಿಂದ ಹಿಡಿದು ಸೆಟ್ ಬಾಯ್ ವರೆಗೆ ಹಲವರು ಪ್ರಭಾಸ್ ಮನೆಯಲ್ಲಿ ಊಟ ಮಾಡಿದ್ದಾರೆ. 

ಪ್ರಭಾಸ್ ಚಿತ್ರೀಕರಣದಲ್ಲಿ ಭಾಗವಹಿಸಿದಾಗ, ಅವರು ಸೆಟ್‌ನಲ್ಲಿ ಏನು ತಿನ್ನುತ್ತಾರೆಯೋ ಅದೇ ಆಹಾರವನ್ನು ತಮ್ಮ ಸೆಟ್‌ನಲ್ಲಿರುವ ಎಲ್ಲರಿಗೂ ತಯಾರಿಸಲಾಗುತ್ತಂತೆ. ಕೃಷ್ಣಂ ರಾಜು ಅವರ ನಿಧನದ ನಂತರ ಪ್ರಭಾಸ್ ಕೂಡ ಲಕ್ಷಾಂತರ ಜನರಿಗೆ ಊಟ ಹಾಕಿದ್ದಾರೆ. 50 ಕೋಟಿ ಖರ್ಚು ಮಾಡಿ ಅಯೋಧ್ಯೆಯಲ್ಲಿ ಅನ್ನದಾನ ಮಾಡಿದ ಪ್ರಭಾಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

RELATED ARTICLES

ಪ್ರಮುಖ ಸುದ್ದಿಗಳು

Recent Comments