HomeNationalಅಫ್ಘಾನ್: ಮಹಿಳಾ ಟಿವಿ ಆಂಕರ್ ಗಳಿಗೆ ತಮ್ಮ ಮುಖ ಮುಚ್ಚಿಕೊಳ್ಳುವಂತೆ ಆದೇಶಿಸಿದ ತಾಲಿಬಾನ್

ಅಫ್ಘಾನ್: ಮಹಿಳಾ ಟಿವಿ ಆಂಕರ್ ಗಳಿಗೆ ತಮ್ಮ ಮುಖ ಮುಚ್ಚಿಕೊಳ್ಳುವಂತೆ ಆದೇಶಿಸಿದ ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ಆಡಳಿತಗಾರರು ಟಿವಿ ಚಾನೆಲ್‌ಗಳಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಆದೇಶಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಅತಿದೊಡ್ಡ ಮಾಧ್ಯಮ ಸಂಸ್ಥೆ ಗುರುವಾರ ತಿಳಿಸಿದೆ.

ಟೋಲೊ ನ್ಯೂಸ್ ಮತ್ತು ಹಲವಾರು ಇತರ ಟಿವಿ ಮತ್ತು ರೇಡಿಯೋ ನೆಟ್‌ವರ್ಕ್‌ಗಳನ್ನು ಹೊಂದಿರುವ ಮೊಬಿ ಗ್ರೂಪ್‌ಗೆ ಈ ಆದೇಶವನ್ನು ಕಳುಹಿಸಲಾಗಿದೆ ಮತ್ತು ಇದನ್ನು ಇತರ ಅಫ್ಘಾನ್ ಮಾಧ್ಯಮಗಳಿಗೂ ಅನ್ವಯಿಸಲಿದೆ ಎಂದು ಹೇಳಲಾಗಿದೆ. ಅಫಘಾನ್ ಸ್ಥಳೀಯ ಮಾಧ್ಯಮದ ಅಧಿಕಾರಿಯೊಬ್ಬರು ತಮ್ಮ ಸ್ಟೇಷನ್ ಗೆ ಈ ರೀತಿಯ ಆದೇಶ ಬಂದಿದೆ ಎಂಬುದನ್ನು ದೃಢಪಡಿಸಿದ್ದಾರೆ.

ಈ ಆದೇಶದ ಬಳಿಕ ಹಲವಾರು ಮಹಿಳಾ ಆ್ಯಂಕರ್‌ಗಳು ಮತ್ತು ನಿರೂಪಕರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ಫೇಸ್ ಮಾಸ್ಕ್‌ಗಳಿಂದ ಮುಖವನ್ನು ಮುಚ್ಚಿರುವ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಟೋಲೊ ನ್ಯೂಸ್ ನಿರೂಪಕಿ ಯಾಲ್ಡಾ ಅಲಿ ಅವರು ಫೇಸ್ ಮಾಸ್ಕ್ ಅನ್ನು ಹಾಕಿಕೊಳ್ಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಹಾಗು ಮಹಿಳೆಯನ್ನು ಅಳಿಸಲಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments