HomeNationalಅಹಮದಾಬಾದ್ ಸ್ಫೋಟ ಅಪರಾಧಿಗಳನ್ನು ಜೀವಂತ ಬಿಡುವುದು ನರಭಕ್ಷಕ ಚಿರತೆಯನ್ನು ಜನರ ಮಧ್ಯೆ ಬಿಟ್ಟಂತೆ: ಕೋರ್ಟ್ ಹೇಳಿದ...

ಅಹಮದಾಬಾದ್ ಸ್ಫೋಟ ಅಪರಾಧಿಗಳನ್ನು ಜೀವಂತ ಬಿಡುವುದು ನರಭಕ್ಷಕ ಚಿರತೆಯನ್ನು ಜನರ ಮಧ್ಯೆ ಬಿಟ್ಟಂತೆ: ಕೋರ್ಟ್ ಹೇಳಿದ 5 ಅಂಶಗಳು

ಅಹ್ಮದಾಬಾದ್: 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರತಿ ಶನಿವಾರ ಮಾಧ್ಯಮಗಳಿಗೆ ಲಭ್ಯವಾಗಿದ್ದು ಪ್ರಕರಣದ ಬಗ್ಗೆ ಮತ್ತು ಅಪರಾಧಿಗಳ ವಿರುದ್ಧ ನ್ಯಾಯಾಲಯವು ಕೆಲವು ಬಲವಾದ ಅವಲೋಕನಗಳನ್ನು ಮಾಡಿದೆ.

56 ಜನ ಮುಗ್ಧರ ಸಾವಿಗೆ ಕಾರಣವಾದ, 200ಕ್ಕೂ ಅಧಿಕ ಜನರನ್ನು ಗಂಭೀರ ಗಾಯಗೊಳಿಸಿ ಹಲವು ಅಂಗಗಳನ್ನು ಊನಗೊಳಿಸಿದ ಪೈಶಾಚಿಕ ಕೃತ್ಯದ ಅಪರಾಧಿಗಳನ್ನು ಸಮಾಜದಲ್ಲಿ ಉಳಿಯಲು ಅವಕಾಶ ನೀಡುವುದು “ನರಭಕ್ಷಕ ಚಿರತೆ”ಯನ್ನು ಜನರ ಮಧ್ಯೆ ಬಿಟ್ಟಂತೆ. ಅವರು ಮರಣದಂಡನೆಗೆ ಅರ್ಹರು ಎಂದು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಬಗ್ಗೆ ಮತ್ತು ಅಪರಾಧಿಗಳ ವಿರುದ್ಧ ನ್ಯಾಯಾಲಯವು ಮಾಡಿದ ಅವಲೋಕನಗಳಲ್ಲಿ ಪ್ರಮುಖವಾದವುಗಳು ಇವು ;

  1. ಪ್ರಕರಣವು “ಅಪರೂಪದ ಪ್ರಕರಣ” ವರ್ಗಕ್ಕೆ ಬರುವುದರಿಂದ ಮರಣದಂಡನೆ ಸೂಕ್ತವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
  2. ಮತಾಂಧತೆ ತುಂಬಿರುವ ಇವರನ್ನು ಸಮಾಜದಲ್ಲಿ ಉಳಿಯಲು ಬಿಟ್ಟರೆ ನರಭಕ್ಷಕ ಚಿರತೆಯನ್ನು ಸಾರ್ವಜನಿಕವಾಗಿ ಬಿಟ್ಟಂತೆ ಆಗುತ್ತದೆ. ಇಂತಹ ಅಪರಾಧಿಗಳು ನರಭಕ್ಷಕ ಚಿರತೆಯಂತಿದ್ದು, ಮಕ್ಕಳು, ಯುವಕರು, ವೃದ್ಧರು, ಮಹಿಳೆಯರು, ಪುರುಷರು, ನವಜಾತ ಶಿಶುಗಳು ಮತ್ತು ವಿವಿಧ ಜಾತಿ ಮತ್ತು ಸಮುದಾಯಗಳ ಜನರನ್ನು ಒಳಗೊಂಡಂತೆ ಸಮಾಜದಲ್ಲಿನ ಅಮಾಯಕರನ್ನು ತಿನ್ನುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
  3. ದೇಶದ ಹಾಗು ಇಲ್ಲಿನ ಜನರ ಸುರಕ್ಷತೆ ಮತ್ತು ಶಾಂತಿಯ ದೃಷ್ಟಿಯಿಂದ, ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜನರಿಗೆ, ಮರಣದಂಡನೆಯೇ ಏಕೈಕ ಆಯ್ಕೆಯಾಗಿದೆ. ಅವರನ್ನು ಶಾಶ್ವತವಾಗಿ ಇರಿಸಲು ದೇಶದಲ್ಲಿ ಯಾವುದೇ ಜೈಲು ಇಲ್ಲ ಎಂದು ನ್ಯಾಯಾಲಯ ಹೇಳಿದೆ.
  4. ಇಷ್ಟು ವರ್ಷಗಳ ಅವಧಿಯ ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಪ್ರತಿ ವಿಷಯದಲ್ಲೂ ಹೆಚ್ಚು ಪರಿಣತರು, ವಿದ್ಯಾವಂತರು, ಅವರಲ್ಲಿ ಕೆಲವರು ವೈದ್ಯರು, ಪ್ರಾಧ್ಯಾಪಕರು ಮತ್ತು ಕಂಪ್ಯೂಟರ್ ತಜ್ಞರು ಆಗಿರುವವರು ಎಂಬುದು ಈ ನ್ಯಾಯಾಲಯದ ಗಮನಕ್ಕೆ ಬಂದಿತು. ಹೆಚ್ಚಿನವರು ಇತರ ರಾಜ್ಯಗಳಲ್ಲಿ ಕೂಡ ಅಪರಾಧಗಳ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲೂ ಅವರ ವಿರುದ್ಧ ಪ್ರಕರಣಗಳು ನಡೆಯುತ್ತಿವೆ. ಆರೋಪಿಗಳಿಂದ ಮಾಹಿತಿ ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದು ನ್ಯಾಯಾಲಯ ಹೇಳಿದೆ.
  1. ಪೈಶಾಚಿಕ ಉಗ್ರ ಕೃತ್ಯ ಎಸಗುವ ಮೊದಲೇ ಆರೋಪಿಗಳು ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಹೇಗೆ, ತನಿಖೆಯ ಸಂದರ್ಭದಲ್ಲಿ ಯಾವ ರೀತಿ ಹೇಳಿಕೆ ಕೊಡಬೇಕು? ಏನನ್ನು ಹಂಚಿಕೊಳ್ಳಬೇಕು ಮತ್ತು ಏನನ್ನು ಮುಚ್ಚಿಡಬೇಕು, ನ್ಯಾಯಾಲಯದಲ್ಲಿ ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದರ ಕುರಿತು ಪೂರ್ವ ಯೋಜನೆಗಳನ್ನು ಸಿದ್ದಪಡಿಸಿದ್ದರು ಎಂದು ವಿಶೇಷ ನ್ಯಾಯಾಲಯ ಹೇಳಿದೆ.

2008ರ ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ ಈ ವಾರದ ಆದಿಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದ ಅಹಮದಾಬಾದ್ ವಿಶೇಷ ನ್ಯಾಯಾಲಯ 49 ಅಪರಾಧಿಗಳ ಪೈಕಿ 38 ಮಂದಿಗೆ ಗಲ್ಲು ಶಿಕ್ಷೆ ಹಾಗು ಉಳಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments