National

ಅಮರನಾಥ ಯಾತ್ರೆ ಸಮಯ ಉಗ್ರ ದಾಳಿಗೆ ಪ್ಲಾನ್: 3 ಇಸ್ಲಾಂ ಭಯೋತ್ಪಾದಕ ಕ್ರಿಮಿಗಳ ಎನ್ಕೌಂಟರ್

ಕಾಶ್ಮೀರ: ಪ್ರಸಿದ್ಧ ಅಮರನಾಥ ಯಾತ್ರೆಯ ಮಾರ್ಗದಲ್ಲಿ ಉಗ್ರ ಧಾಳಿಯನ್ನು ನಡೆಸಲು ಭಯೋತ್ಪಾದಕರು ನಡೆಸಿದ್ದ ಹುನ್ನಾರವನ್ನು ಭಾಗಶಃ ಸೇನಾ ಪಡೆಗಳು ವಿಫಲಗೊಳಿಸಿದ್ದು ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಅಮರನಾಥ ಯಾತ್ರೆಯ ಪ್ರಮುಖ ಮಾರ್ಗವಾದ ಅನಂತನಾಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಎನ್ಕೌಂಟರ್ ಆದ ಮೂವರು ಉಗ್ರರ ಪೈಕಿ ಓರ್ವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಸೇರಿದವನಾಗಿದ್ದಾನೆ. ಅಶ್ರಫ್ ಮೋಲ್ವಿ ಹಿಜ್ಬುಲ್ ಮುಜಾಹಿದ್ದೀನಿ ಭಯೋತ್ಪಾದಕ ಸಂಘಟನೆಯ ಹಳೆಯ ಸದಸ್ಯ ಎಂದು ತಿಳಿದು ಬಂದಿದೆ.

ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ, ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ಸಂದರ್ಭ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಶುರುವಿಟ್ಟುಕೊಂಡರು. ಆಗ ಪ್ರತಿ ಧಾಳಿ ನಡೆಸಿದ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಮೂವರು ಇಸ್ಲಾಂ ಭಯೋತ್ಪಾದಕ ಕ್ರಿಮಿಗಳನ್ನು ಹೊಸಕಿ ಹಾಕಿದರು.

ಅಮರನಾಥ ಯಾತ್ರೆಯು ಬರೋಬ್ಬರಿ ಎರಡು ವರ್ಷಗಳ ನಂತರ ಜೂನ್ 30 ರಿಂದ ಆರಂಭವಾಗಲಿದೆ.

Exit mobile version