National

ಹಿಂದೂ ಗೆಳೆಯನನ್ನು ವರಿಸಿದ ಅಮೀರ್ ಖಾನ್ ಪುತ್ರಿ ಇರಾ: ನೂಪುರ್ ಶಿಖರೆ ಜತೆ ವಿವಾಹ.

ಮುಂಬೈ: ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಬುಧವಾರ ತಮ್ಮ ಬಹುಕಾಲದ ಸಂಗಾತಿ ನೂಪುರ್ ಶಿಖರೆ ಅವರನ್ನು ವಿವಾಹವಾಗಿದ್ದಾರೆ. ಮಾನಸಿಕ ಆರೋಗ್ಯ ಬೆಂಬಲ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಇರಾ ಅವರು ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಾದ ನೂಪುರ್ ಅವರೊಂದಿಗೆ ಉಪನಗರ ಬಾಂದ್ರಾದಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಲ್ಲಿ ಅಮೀರ್, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಸಮಾರಂಭದ ನಂತರ ಅದೇ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಿತು. 26 ವರ್ಷದ ಇರಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಜನವರಿ 8 ರಂದು ಉದಯಪುರದಲ್ಲಿ ದಂಪತಿಗಳು ಮತ್ತೊಂದು ವಿವಾಹ ಸಮಾರಂಭವನ್ನು ನಡೆಸಲಿದ್ದಾರೆ, ನಂತರ ಜನವರಿ 13 ರಂದು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಮೂರು ವರ್ಷಗಳಿಂದ ಸಂಬಂಧದಲ್ಲಿರುವ ಇರಾ ಮತ್ತು ನೂಪುರ್ ನವೆಂಬರ್ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
 https://chat.whatsapp.com/CMUDdTXoFVn7atm3zHYGrd

Exit mobile version