National

ಕೊರೊನದಿಂದ ಬದುಕಿ ಬಂದಿದ್ದಕ್ಕೆ ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಹರಕೆ ಅರ್ಪಿಸಿದ ಭಕ್ತ

ತಿರುವನಂತಪುರಂ: ಆಂಧ್ರಪ್ರದೇಶದ ಅಯ್ಯಪ್ಪ ಭಕ್ತರೊಬ್ಬರು ತಾನು ಕೊರೊನದಿಂದ ಚೇತರಿಸಿದರೆ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಇದೀಗ ಅಯ್ಯಪ್ಪ ಸ್ವಾಮಿಗೆ ವಜ್ರದಿಂದ ಸಿಂಗರಿಸಿದ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ.

ಆಂಧ್ರದ ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಅವರಿಗೆ ಕಳೆದ ವರ್ಷ ಕೋರೋನ ತಗುಲಿತ್ತು. ಆ ಸಂದರ್ಭ ಈ ಕೊರೋನಾದಿಂದ ಗುಣಮುಖವಾದರೆ ಶಬರಿಮಲೆ ಅಯ್ಯಪ್ಪಸ್ವಾಮಿಗೆ ವಜ್ರ ಖಚಿತ ಚಿನ್ನದ ಕಿರೀಟ ನೀಡುವುದಾಗಿ ಹರಕೆ ಹೊತ್ತು ಕೊಂಡಿದ್ದರು. ಇದೀಗ ಕೇರಳದ ಹೈಕೋರ್ಟ್ ವಕೀಲರ ನೆರವಿನಿಂದ ವೆಂಕಟಸುಬ್ಬಯ್ಯ ಅವರು ಶಬರಿಮಲೆಯ ಮುಖ್ಯ ಅರ್ಚಕರ ಮೂಲಕ ಕಿರೀಟವನ್ನು ಅಯ್ಯಪ್ಪ ಸ್ವಾಮಿಗೆ ಅರ್ಪಿಸಿದ್ದಾರೆ.

ಸದ್ಯಕ್ಕೆ ಕಿರೀಟದ ಮೌಲ್ಯದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

Exit mobile version