ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೆ ಮುಸುಕುಧಾರಿಗಳ ಬಗೆಗಿನ ಸುದ್ದಿಯೊಂದು ಹೊರಬಿದ್ದಿದೆ. ಭಾರತ ವಿರೋಧಿ ಹಾಗು ಜಾಗತಿಕ ಉಗ್ರ ಮಸೂದ್ ಅಜರ್ ನ ಆಪ್ತ ಮುಲ್ಲಾ ಒಬ್ಬನನ್ನು ಮುಸುಕುಧಾರಿಗಳು ಹಾಡುಹಗಲೇ ಆತನ ಕಾರಿನಲ್ಲೇ ಗುಂಡು ಹಾರಿಸಿ ಜನ್ನತ್ ಗೆ ಕಳುಹಿಸಿದ್ದಾರೆ. ಜತೆಗೆ ಆತನ ಡ್ರೈವರ್ ಅನ್ನು ಗಾಯಗೊಳಿಸಿ ಬಿಡಲಾಗಿದೆ.

ಸತ್ತ ಮುಲ್ಲಾ ಭಾರತ ವಿರೋಧಿ ಆಗಿದ್ದ, ಪಾಕ್ ನ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಇಟ್ಟುಕೊಂಡಿದ್ದ, ಜತೆಗೆ ಇರಾನ್ ಹಾಗು ಶಿಯಾ ಮುಸ್ಲಿಮರ ದೊಡ್ಡ ಶತ್ರು ಆಗಿದ್ದ ಈತನ ಹೆಸರು ಮಸೂದ್ ಉರ್ ರೆಹಮಾನ್. ಭಾರತ ವಿರೋಧಿ ಭಾಷಣಗಳ ಮೂಲಕ ಪ್ರಸಿದ್ಧಿ ಹೊಂದಿದ್ದ ಮಸೂದ್ ರೆಹಮಾನ್ ಪಾಕಿಸ್ತಾನದ ಸುನ್ನಿ ಉಲೇಮ ಕೌನ್ಸಿಲ್ ನ ಡೆಪ್ಯುಟಿ ಸೆಕ್ರೆಟರಿ ಕೂಡ ಆಗಿದ್ದ. ಈತನನ್ನು ಹಾಡುಹಗಲೇ ಜನನಿಬಿಡ ಪ್ರದೇಶದಲ್ಲೇ ಅತೀ ಧೈರ್ಯದಿಂದ ಮುಸುಕುಧಾರಿಗಳು ಹೊಡೆದು ಮುಗಿಸಿದ್ದಾರೆ.
ಇಬ್ಬರು ಅಪರಿಚಿತ ಮುಸುಕುಧಾರಿಗಳು ಮಸೂದ್ ರೆಹಮಾನ್ ನ ಕಾರನ್ನು ಅಡ್ಡಗಟ್ಟಿ ಗುಂಡು ಹೊಡೆದು ಸಾಯಿಸಿ, ಅಡ್ಡ ಬಂದು ರಕ್ಷಣೆಗೆ ಯತ್ನಿಸಿದ ಆತನ ಡ್ರೈವರನಿಗೂ ಗುಂಡು ಹೊಡೆದು ಗಾಯಗೊಳಿಸಿ ಮಸೂದ್ ರೆಹಮಾನ್ ಸತ್ತಿದ್ದಾನೆ ಅನ್ನೋದನ್ನ ಖಚಿತಪಡಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನನಿಬಿಡ ಪ್ರದೇಶದಲ್ಲಿಅದರಲ್ಲೂ ಇಸ್ಲಾಮಾಬಾದ್ ನಲ್ಲಿ ಈ ಘಟನೆ ನಡೆದಿರೋದು ಪಾಕಿಸ್ತಾನಕ್ಕೂ ನಂಬಲು ಕಷ್ಟವಾಗುತ್ತಿದೆ.
ಈತ ತನ್ನ ಸಂಘಟನೆ ಮೂಲಕ ಸ್ವತಃ ಮುಸ್ಲಿಮರ ಹತ್ಯೆಯನ್ನೂ ಮಾಡಿದ್ದ. ಸಾವಿರಾರು ಶಿಯಾ ಮುಸ್ಲಿಮರ ಸಾವಿಗೆ ಈತ ಕಾರಣನಾಗಿದ್ದ. ಹಾಗಾಗಿ ಈತನ ಸಾವಿನ ಹಿಂದೆ ಇರಾನ್ ಕೈವಾಡ ಕೂಡ ಇರಬಹುದು ಎಂದು ಅಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈತನ ಶವ ಯಾತ್ರೆಯಲ್ಲಿ ಸೇರಿದ್ದ ಜನ ಇರಾನ್ ಹಾಗು ಶಿಯಾ ವಿರುದ್ಧ ಘೋಷಣೆ ಕೂಗುತ್ತಿದ್ದುದೇ ಇದಕ್ಕೆ ಮತ್ತಷ್ಟು ಪುಷ್ಟಿ ಕೊಡುವಂತಿದೆ. ಮುಗಿಸಿದವರು ಯಾರೇ ಇರಲಿ ಭಾರತ ವಿರೋಧಿ ಮುಲ್ಲಾನೊಬ್ಬನ ಅಂತ್ಯ ಆತನಿಗೆ ತಕ್ಕುದಾಗಿಯೇ ಆಗಿದೆ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd