
ಗುವಾಹಟಿ : ಅಫ್ಘಾನಿಸ್ತಾನದ ತಾಲಿಬಾನ್ ಉಗ್ರ ಸಂಘಟನೆ ಬೆಂಬಲಿಸಿ, ಭಾರತವನ್ನು ದೂಷಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಒಟ್ಟು 14 ಮಂದಿ ದೇಶದ್ರೋಹಿಗಳನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ ಮೆಡಿಕಲ್ ವಿದ್ಯಾರ್ಥಿಯೂ ಸೇರಿದ್ದಾನೆ.
ಬಂಧಿತರನ್ನು ಮೌಲಾನಾ ಫಝುಲ್ ಕರೀಂ, ಅಬುಬಕ್ಕರ್ ಸಿದ್ದಿಕ್, ಸೈದುಲ್ ಹಕ್, ಜಾವೆದ್ ಮಝುಮದಾರ್, ಮೊಜಿದುಲ್ ಇಸ್ಲಾಂ, ಫಾರೂಕ್ ಹುಸ್ಸೇನ್ ಖಾನ್, ಸಯ್ಯದ್ ಅಹ್ಮದ್, ಅರ್ಮಾನ್ ಹುಸೇನ್, ನದೀಮ್ ಅಖ್ತರ್, ನೂರ್ ಆಲಂ, ಮೌಲಾನಾ ಯಾಸೀನ್ ಖಾನ್, ಮೌಲಾನಾ ಬಸಿರುದ್ದೀನ್ ಲಸ್ಕರ್, ಮುಜೀಬ್ ಉದ್ದಿನ್ ಮತ್ತು ಮೊರ್ತಜಾ ಹುಸೇನ್ ಖಾನ್ ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ವಹಿಸಿ ದೇಶದ್ರೋಹದ ಪೋಸ್ಟ್ ಹಾಕುವವರನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಜಾಲತಾಣಗಳಲ್ಲಿ ಬರೆಯುವಾಗ ಎಚ್ಚರಿಕೆ ವಹಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮಕ್ಕೆ ತಯಾರಾಗಿರಿ ಎಂದು ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಅವರು ಹೇಳಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ತಾಲಿಬಾನ್ ಅನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದರೆ, ಕೆಲವರು ಭಾರತವನ್ನು ಟೀಕಿಸಿ ಬರೆದಿದ್ದರು. ಭಾರತೀಯ ಮಾಧ್ಯಮಗಳು ತಾಲಿಬಾನ್ ಅನ್ನು ಬೆಂಬಲಿಸಬೇಕು, ಇಲ್ಲದಿದ್ದರೆ ಭಾರತದಲ್ಲಿ ಕೋಮು ಸಂಘರ್ಷಗಳು ನಡೆಯಬಹುದು ಎಂಬರ್ಥದಲ್ಲಿ ಬರೆಯಲಾಗಿತ್ತು.