HomeNationalಇಮ್ರಾನ್ ಸಂಸತ್ ವಿಸರ್ಜನೆ ದಾಳಕ್ಕೆ ಸುಪ್ರೀಂ ಕೋರ್ಟ್‌ ಬ್ರೇಕ್: ಸರ್ಕಾರ ವಿಸರ್ಜನೆ ಅಸಂವಿಧಾನಿಕ ಎಂದು ತೀರ್ಪು

ಇಮ್ರಾನ್ ಸಂಸತ್ ವಿಸರ್ಜನೆ ದಾಳಕ್ಕೆ ಸುಪ್ರೀಂ ಕೋರ್ಟ್‌ ಬ್ರೇಕ್: ಸರ್ಕಾರ ವಿಸರ್ಜನೆ ಅಸಂವಿಧಾನಿಕ ಎಂದು ತೀರ್ಪು

ಇಸ್ಲಮಾಬಾದ್‌: ವಿಶ್ವಾಸಮತ ಸಾಬೀತು ಮಾಡದೇ ಸರ್ಕಾರ ವಿಸರ್ಜನೆ ಮಾಡಿ ರಾಜಕೀಯ ದಳ ಉದುರಿಸಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಕ್ರಮ ಅಸಂವಿಧಾನಿಕ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಏಪ್ರಿಲ್‌ 9 ರಂದು ವಿಶ್ವಾಸ ಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್‌ ಇಮ್ರಾನ್‌ ಖಾನ್‌ಗೆ ಸೂಚಿಸಿದೆ.

ವಿರೋಧ ಪಕ್ಷಗಳು ಇಮ್ರಾನ್ ಖಾನ್ ಸರಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಮಂಡನೆಯನ್ನು ಉಪಸಭಾಪತಿ ತಿರಸ್ಕರಿಸಿದ್ದರು. ನಂತರ ಪ್ರಧಾನಿ ಇಮ್ರಾನ್‌ ಖಾನ್‌ ಸಂಸತ್‌ ವಿಸರ್ಜಿಸಿ ಚುನಾವಣೆಯತ್ತ ಮುಖ ಮಾಡಿದ್ದರು. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪಾಕ್‌ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.

ಗುರುವಾರ ಪಾಕ್ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟ ಮಾಡಿದ್ದು, ಅವಿಶ್ವಾಸ ನಿಲುವಳಿಯನ್ನು ತಿರಸ್ಕಾರ ಮಾಡಿದ ಉಪಸಭಾಪತಿ ಕ್ರಮವನ್ನು ಅಸಂವಿಧಾನಿಕ ಎಂದು ಹೇಳಿ ತೀರ್ಪು ನೀಡಿದೆ. ಸಂಸತ್‌ ವಿಸರ್ಜನೆ ಕೂಡ ಕಾನೂನು ಬಾಹಿರ ಎಂದು ಸುಪ್ರೀಂ ತೀರ್ಪು ಹೇಳಿದೆ. ಶನಿವಾರ ಏಪ್ರಿಲ್‌ 9 ರಂದು ಸಂಸತ್‌ ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಪಡಿಸಲು ಇಮ್ರಾನ್ ಖಾನ್ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಅದೇಶ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments