National

ಸೆಕ್ಸ್ ದಂಧೆ ನಡೆಸುತ್ತಿದ್ದ ಬಿಜೆಪಿ ನಾಯಕನ ಬಂಧನ

ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಮಾಂಸದ ದಂಧೆ (ಸೆಕ್ಸ್ ದಂಧೆ) ನಡೆಸುತ್ತಿದ್ದ ಆರೋಪದ ಮೇಲೆ ಅಲ್ಲಿನ ಬಿಜೆಪಿ ಮುಖಂಡ ಹಾಗೂ ಇತರ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪಶ್ಚಿಮ ಬಂಗಾಲ ಬಿಜೆಪಿಯು ಬಂಧಿತ ಆರೋಪಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿಕೊಂಡಿದೆ.

ಸ್ಥಳೀಯ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ ಮತ್ತು ಆತನ 10 ಸಹಚರರನ್ನು ಗುರುವಾರ ಸಂಜೆ ಸಂಕ್ರೈಲ್ ಪ್ರದೇಶದ ಹೋಟೆಲ್‌ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಈ ಘಟನೆಯು ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬಿಜೆಪಿ ಮೇಲೆ ಎರಗಿ ಬಿದ್ದಿದ್ದು, ಬಿಜೆಪಿಯು ಸೆಕ್ಸ್ ವ್ಯಾಪಾರದಲ್ಲಿ ತೊಡಗಿರುವ ನಾಯಕರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.

“ದಾಳಿಯ ಸಂದರ್ಭದಲ್ಲಿ, ಸಬ್ಯಸಾಚಿ ಘೋಷ್ ಒಡೆತನದ ಹೋಟೆಲ್‌ನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಮತ್ತು ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ನಾಲ್ವರು ಮಹಿಳೆಯರನ್ನು ಲಿಲುವಾ ಹೋಮ್‌ಗೆ ಮತ್ತು ಇಬ್ಬರು ಅಪ್ರಾಪ್ತರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆದೊಯ್ಯಲಾಗಿದೆ. ಬಂಧಿತರು ಸೆಕ್ಸ್ ದಂಧೆ ನಡೆಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 116ರ ಬಳಿ ಇರುವ ಹೋಟೆಲ್‌ಗೆ ಹುಡುಗಿಯರು ಮತ್ತು ಮಹಿಳೆಯರನ್ನು ಕರೆತರುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version