HomeNationalಆಫ್ಘಾನಿಸ್ತಾನದ ಅಸ್ಥಿರತೆಯಲ್ಲಿ ಪಾಕಿಸ್ತಾನದ ಪಾತ್ರ ಗಣನೀಯ: ಸಿ.ಆರ್.ಎಸ್ ವರದಿ

ಆಫ್ಘಾನಿಸ್ತಾನದ ಅಸ್ಥಿರತೆಯಲ್ಲಿ ಪಾಕಿಸ್ತಾನದ ಪಾತ್ರ ಗಣನೀಯ: ಸಿ.ಆರ್.ಎಸ್ ವರದಿ

ಕಾಬೂಲ್: ಅಫ್ಘಾನ್ ಅಸ್ಥಿರತೆ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ವರದಿಯೊಂದು ಹೇಳಿದೆ. ಈ ಮೂಲಕ ಪಾಕ್ ಬಣ್ಣ ವಿಶ್ವದ ಮುಂದೆ ಮತ್ತೊಮ್ಮೆ ಬಯಲಾಗಿದೆ. ಅಮೇರಿಕಾದ ಸಿ.ಆರ್.ಎಸ್ ವರದಿಯು ಪಾಕಿಸ್ತಾನವು ಆಫ್ಘಾನಿಸ್ತಾನ ದಲ್ಲಿ ಅಸ್ಥಿರತೆಯನ್ನು ಉಂಟುಮಾಡಲು ನಡೆಸಿದ ಪ್ರಯತ್ನಗಳ ಕುರಿತು ಬೆಳಕು ಚೆಲ್ಲಿದೆ.

ಸಿ. ಆರ್.ಎಸ್ ವರದಿಯನ್ನು ಅಮೆರಿಕದ ಸಂಸತ್ ಸದಸ್ಯರು ಪರಾಮರ್ಶೆ ನಡೆಸಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಸುತ್ತಾರೆ. ಈ ವರದಿಯ ಮೂಲಕ ಆಫ್ಘಾನಿಸ್ತಾನದಲ್ಲಿ ಅಸ್ಥಿರತೆಯನ್ನು ಸ್ಥಾಪಿಸಲು ಪಾಕಿಸ್ತಾನವು ನಡೆಸಿದ ಪ್ರಯತ್ನಗಳು ಇನ್ನೊಮ್ಮೆ ಜಾಹೀರಾದಂತಾಗಿವೆ. ಇನ್ನೊಂದೆಡೆ ಪಾಕಿಸ್ತಾನವು ವಿಶ್ವದ ರಾಷ್ಟ್ರಗಳು ಆಫ್ಘಾನಿಸ್ತಾನದ ತಾಲಿಬಾನ್ ನೊಂದಿಗೆ ವ್ಯವಹರಿಸುವoತೆ ಮನವೊಲಿಸಲು ಪ್ರಯತ್ನಿಸುತ್ತಿದೆ.

ಇದೇ ಕಳೆದ ಆಗಸ್ಟ್ 15ರಂದು ಉಗ್ರ ಸಂಘಟನೆ ತಾಲಿಬಾನ್ ಅಲ್ಲಿನ ಸರಕಾರವನ್ನು ಕಿತ್ತೊಗೆದು ಸಂಪೂರ್ಣ ಆಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ತಾಲಿಬಾನ್ ಅಲ್ಲಿನ ಆಡಳಿತವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡ ನಂತರ ಅಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಜನರು ನಿರಾಶ್ರಿತರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments