National

ಭಾರತದ ಗಡಿ ಹತ್ತಿರ 30 ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿರುವ ಚೀನಾ

ನವದೆಹಲಿ: ಕುತಂತ್ರಿ ಚೀನಾ ಕಳೆದ ವರ್ಷ ಭಾರತದ ಗಡಿಯಲ್ಲಿ ಮುಖಭಂಗ ಅನುಭವಿಸಿದ ನಂತರ ಇದೀಗ ಸಕಲ ರೀತಿಯಲ್ಲಿ ತನ್ನ ಗಡಿಯನ್ನು ಸಜ್ಜುಗೊಳಿಸುತ್ತಿದ್ದು ಭಾರತದ ಗಡಿ ಬಳಿ ಬರೋಬ್ಬರಿ 30 ವಿಮಾನನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಭಾರತದ ಗಡಿ ಸಮೀಪದ ಟಿಬೆಟ್ ಹಾಗು ಶಿಂಜಿಯಾಂಗ್ ಪ್ರದೇಶಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ ಎಂದು ಚೀನಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಮೂಲಕ ಚೀನಾದ ಗಡಿಭಾಗಕ್ಕೆ ನಾಗರೀಕ ಹಾಗು ಮಿಲಿಟರಿ ಮೂಲ ಸೌಕರ್ಯ ಸಾಗಾಟಕ್ಕೆ ಕಡಿಮೆ ಸಮಯ ತೆಗೆದುಕೊಳ್ಳಲಿದೆ ಎಂಬುದು ಚೀನಾ ಲೆಕ್ಕಾಚಾರ. ಗಡಿಭಾಗದಲ್ಲಿ ಮೂಲ ಸೌಕರ್ಯ ವೃದ್ಧಿಗೆ ಚೀನಾ ಭಾರೀ ಗಮನ ನೀಡುತ್ತಿದ್ದು, ಇತ್ತೀಚಿಗೆ ಅರುಣಾಚಲ ಪ್ರದೇಶ ಬಳಿಯ ಚೀನಾ ಗಡಿ ನಿಯುಂಗ್ಚಿಯಿಂದ ಪ್ರಾದೇಶಿಕ ರಾಜಧಾನಿ ಲಾಸಾಗೆ ಸಂಪರ್ಕಿಸುವ ಬುಲೆಟ್ ರೈಲು ಮಾರ್ಗವನ್ನು ಆರಂಭಿಸಿತ್ತು.

ಟಿಬೆಟ್ ಹಾಗು ಶಿಂಜಿಯಾಂಗ್ ಪದೇಶದ ಸುತ್ತ ಮುತ್ತ 30 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ವೆಸ್ಟೆರ್ನ್ ಥಿಯೇಟರ್ ಕಮಾಂಡ್ ಹೇಳಿದೆ. ಟಿಬೆಟ್ ಪ್ರಾಂತ್ಯ ಹಾಗು ಭಾರತದೊಂದಿಗಿನ ಗಡಿ ಜಾಗದ ಉಸ್ತುವಾರಿಯನ್ನು ನೋಡಿಕೊಳ್ಳುವ ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವನ್ನು ವೆಸ್ಟೆರ್ನ್ ಥಿಯೇಟರ್ ಕಮಾಂಡ್ ಎನ್ನುತ್ತಾರೆ.

ಇತ್ತೀಚಿಗೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರು ಗಡಿ ಭಾಗವಾದ ನಿಯುಂಗ್ಚಿಗೆ ಬಹೆತಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಮೂಲಕ ಭಾರತದೊಂದಿಗಿನ ಗಡಿ ಬಗ್ಗೆ ತೀವ್ರ ರೀತಿಯಲ್ಲಿ ಕಾರ್ಯಪೃವೃತ್ತವಾದಂತೆ ಕಾಣುತ್ತಿದೆ. ಈ ಭೇಟಿಯು ಟಿಬೆಟ್ ಗಡಿ ಭಾಗಕ್ಕೆ ಚೀನಾ ನಾಯಕರೊಬ್ಬರು ನೀಡಿದ ಮೊದಲ ಭೇಟಿಯಾಗಿತ್ತು.

Exit mobile version