National

ಪಾಕ್ ಆಕ್ರಮಿತ ಕಾಶ್ಮೀರ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧಾಭ್ಯಾಸಕ್ಕೆ ಚೀನಾ ವಿರೋಧ

ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಎಲ್ಎಸಿ ಬಳಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳ ಜಂಟಿ ಸೇನಾ ಯುದ್ಧ ಅಭ್ಯಾಸವು ನವದೆಹಲಿ ಮತ್ತು ಬೀಜಿಂಗ್ ನಡುವೆ ಸಹಿ ಮಾಡಿದ ಗಡಿ ಒಪ್ಪಂದಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಆರೋಪಿಸಿದೆ.

ಭಾರತ ಅಮೇರಿಕ ಎರಡು ರಾಷ್ಟ್ರಗಳ ಸೇನೆಗಳ ನಡುವೆ ಸೇನಾ ಅಭ್ಯಾಸಗಳು, ತಂತ್ರಗಳು ಹಾಗು ಕಾರ್ಯವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಸೇನಾ ಸಮರಾಭ್ಯಾಸ ನಡೆಸಲಾಗುತ್ತದೆ. 18ನೇ ಭಾರತ-ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ ಈಗ ಉತ್ತರಾಖಂಡದಲ್ಲಿ ನಡೆಯುತ್ತಿದೆ. ಇದು ಎಲ್‌ಎಸಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಸೇನಾ ಯುದ್ಧ ಅಭ್ಯಾಸವು 1993 ಮತ್ತು 1996 ರಲ್ಲಿ ಚೀನಾ ಮತ್ತು ಭಾರತ ನಡುವಿನ ಒಪ್ಪಂದದ ಮನೋಭಾವವನ್ನು ಉಲ್ಲಂಘಿಸುತ್ತದೆ” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

Exit mobile version