National

ಕೊರೋನಾ ಹೊಸ ರೂಪಾಂತರಿ XE ಮುಂಬೈನಲ್ಲಿ ಪತ್ತೆ

ನವದೆಹಲಿ: ಅತಿ ವೇಗವಾಗಿ ಹರಡಬಲ್ಲ ಕೊರೋನಾ ವೈರಸ್ ಹೊಸ ರೂಪಾಂತರಿ ‘ಎಕ್ಸ್ ಇ’ ಭಾರತಕ್ಕೂ ಕಾಲಿಟ್ಟಿದ್ದು ದೇಶದ ಮೊದಲ ಪ್ರಕರಣ ಬುಧವಾರ ಮುಂಬೈನಲ್ಲಿ ಪತ್ತೆಯಾಗಿದೆ.

ಹೊಸ ವೈರಸ್‌ನ ಹೊಸ ರೂಪಾಂತರಗಳನ್ನು ಹೊಂದಿರುವ ರೋಗಿಗೆ ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಕಂಡುಬಂದಿಲ್ಲ. ಪಾಸಿಟಿವ್ ಬಂದ 230 ಮುಂಬೈ ರೋಗಿಗಳಲ್ಲಿ 228 ಒಮಿಕ್ರಾನ್, ಒಂದು ಕಪ್ಪಾ ಮತ್ತು ಒಂದು XE ವೈರಸ್ ದೃಢಪಟ್ಟಿದೆ. ಒಟ್ಟು 230 ರೋಗಿಗಳಲ್ಲಿ 21 ಮಂದಿಯನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ೨೧ ಮಂದಿಯಲ್ಲಿ ಯಾರಿಗೂ ಆಮ್ಲಜನಕ ಅಥವಾ ತೀವ್ರ ನಿಗಾ ಘಟಕದ ಅಗತ್ಯ ಕಂಡು ಬಂದಿಲ್ಲ ಎಂದು ವರದಿಯಾಗಿದೆ.

ಆಸ್ಪತ್ರೆಗೆ ದಾಖಲಾದ ೨೧ ಮಂದಿಯಲ್ಲಿ 12 ಮಂದಿ ಲಸಿಕೆ ಹಾಕಿಸಿಕೊಂಡಿಲ್ಲ ಹಾಗು ೯ ಮಂದಿ ಎರಡೂ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Exit mobile version