National

ಅಯೋಧ್ಯೆ ವಿಶೇಷ: ರಾಮ ಮಂದಿರ ತಲುಪಿದ 2,400 ಕೆ.ಜಿ ತೂಕದ ದೇಶದ ಅತೀ ದೊಡ್ಡ ಘಂಟೆ

ಲಕ್ನೋ: ದೇಶದೆಲ್ಲೆಡೆ ಅಯೋಧ್ಯೆ ರಾಮ ಮಂದಿರದ್ದೇ ಸುದ್ದಿ. ಅಕ್ಷತೆ ಹಂಚುವಿಕೆಯಿಂದ ಹಿಡಿದು ರಾಮನಾಮ ಜಪ, ದೇಗುಲ ಸ್ವಚ್ಛತಾ ಕಾರ್ಯಕ್ರಮ ಹೀಗೆ ಇಡೀ ದೇಶವೇ ರಾಮ ಮಂದಿರ ಲೋಕಾರ್ಪಣೆಯನ್ನು ಎದುರುಗೊಳ್ಳಲು ಸಿದ್ಧವಾಗುತ್ತಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಯೋಧ್ಯೆಗೆ ಸಾಕಷ್ಟು ಕೊಡುಗೆಗಳು ಬಂದಿವೆ. ಅವುಗಳಲ್ಲಿ ದೇಶದ ಅತೀ ಗೊಡ್ಡ ಘಂಟೆಯೂ ಸೇರಿದೆ. ಬರೋಬ್ಬರಿ 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ರಾಮ ಮಂದಿರ ತಲುಪಿದೆ.

ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಸಮಯ ಹಿಡಿದಿದೆ. ಸುಮಾರು 30 ಕಾರ್ಮಿಕರ ತಂಡದಿಂದ ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ಈ ಘಂಟೆ ತಯಾರಾಗಿದೆ.

ಈ ಬೃಹತ್ ಘಟನೆಯನ್ನು ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಅವರು ಅವರ ದಿವಂಗತ ಸಹೋದರನ ಪರವಾಗಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಆದಿತ್ಯ ಮಿತ್ತಲ್, ನನ್ನ ಸಹೋದರ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು ಕೊಡುಗೆಯಾಗಿ ನೀಡಲು ಇಚ್ಛಿಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

Exit mobile version