
ನವದೆಹಲಿ: ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳಿಂದ ಬಂದ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಈ ಶಾಲಿನ ಬಜೆಟಿನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ಇದು ಏಪ್ರಿಲ್ ಒಂದರ ನಂತರ ಅನುಷ್ಠಾನಕ್ಕೆ ಬರಲಿದೆ.
ಆರ್.ಬಿ.ಐ ದೇಶೀಯ ಡಿಜಿಟಲ್ ಕರೆನ್ಸಿಯನ್ನು ಈ ವರ್ಷದ ಒಳಗೆ ಪರಿಚಯಿಸಲಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿಯು ಕರೆನ್ಸಿ ಅಲ್ಲ. ಆರ್.ಬಿ.ಐ ಹೊರ ತರುವ ಡಿಜಿಟಲ್ ಕರೆನ್ಸಿಗೆ ಮಾತ್ರ ಬೆಲೆ ಎಂದು ಸೀತಾರಾಮನ್ ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮೇಲೆ ಶೇಕಡಾ 1ರಷ್ಟು ಟಿಡಿಎಸ್ ಅನ್ನು ವಿಧಿಸಲಾಗುತ್ತದೆ. ಈ ಮೂಲಕ ಕ್ರಿಪ್ಟೋವನ್ನು ತೆರಿಗೆ ವ್ಯಾಪ್ತಿಗೆ ತರುವುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.