
ನವದೆಹಲಿ: ದೆಹಲಿಯ ವಿವಾದಿತ ಕುತುಬ್ ಮಿನಾರ್ ನಲ್ಲಿರುವ ಎರಡು ಗಣೇಶ ಮೂರ್ತಿಗಳನ್ನು ತೆರವುಗೊಳಿಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ದೆಹಲಿ ಕೋರ್ಟ್ ನಿರ್ದೇಶನ ನೀಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಏಪ್ರಿಲ್ 13 ರಂದು ಆದೇಶ ಹೊರಡಿಸಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದಾರೆ.
ಅರ್ಜಿದಾರರ ಪರ ವಕೀಲ ಹರಿಶಂಕರ್ ಜೈನ್, “ಕುತುಬ್ ಮಿನಾರ್ ನಿಂದ ಸುಮಾರು 27 ಹಿಂದೂ ದೇವಾಲಯಗಳು ಹಾನಿಗೊಳಲಾಗಿವೆ. ಕುತುಬ್ ಮಿನರ್ ಪ್ರಾಂಗಣದಲ್ಲಿ ಗಣೇಶನ ಎರಡು ಮೂರ್ತಿಗಳಿದ್ದು, ಅವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ತೆರವುಗೊಳಿಸಿರುವ ಸಾಧ್ಯತೆಯಿರುವುದಾಗಿ ಹೇಳಿದರು.”
ಕುತುಬ್ ಮಿನಾರ್ ಅನ್ನು ಸುಮಾರು 27 ಹಿಂದೂ ದೇಗುಲಗಳನ್ನು ನಾಶಗೊಳಿಸಿ ನಿರ್ಮಿಸಲಾಗಿದೆ ಹಾಗು ಕುತುಬ್ ಮಿನಾರ್ ಕೂಡ ವಿಷ್ಣು ಸ್ಥ೦ಭ ಆಗಿತ್ತು ಎಂದು ಹಿಂದೂ ಮುಖಂಡರು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಸಾಕ್ಷಿ ಎಂಬಂತೆ ಕುತುಬ್ ಮಿನಾರ್ ಪ್ರಾಂಗಣ ತುಂಬಾ ಹಿಂದೂ ದೇವಾಲಯಗಳ ಕುರುಹುಗಳೇ ಯಥೇಚ್ಛಾವಾಗಿ ಕಾಣಸಿಗುತ್ತದೆ. ಕುತುಬ್ ಮಿನಾರ್ ಮೇಲೂ ಕೆಲವು ಹಿಂದೂ ಧಾರ್ಮಿಕ ಕುರುಹುಗಳನ್ನು ಕಾಣಬಹುದಾಗಿದೆ.