HomeNationalವಾರಣಾಸಿ ವಿವಾದಿತ ಜ್ಞಾನವ್ಯಾಪಿ ಮಸೀದಿ ಸಮೀಕ್ಷೆ: ಅಯೋಧ್ಯೆ ಬಳಿಕ ಹಿಂದೂಗಳ ಮುಂದಿನ ದೇಗುಲ ವಾಪಸು ಅಭಿಯಾನ...

ವಾರಣಾಸಿ ವಿವಾದಿತ ಜ್ಞಾನವ್ಯಾಪಿ ಮಸೀದಿ ಸಮೀಕ್ಷೆ: ಅಯೋಧ್ಯೆ ಬಳಿಕ ಹಿಂದೂಗಳ ಮುಂದಿನ ದೇಗುಲ ವಾಪಸು ಅಭಿಯಾನ ಇದೇ ‘ಜ್ಞಾನವ್ಯಾಪಿ’

ವಾರಾಣಾಸಿ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾತೆ ಶೃಂಗಾರ ಗೌರಿ ಸ್ಥಳದ ವಿಡಿಯೋ-ಗ್ರಾಫಿಕ್ ಸಮೀಕ್ಷೆ ಮತ್ತು ಪರಿಶೀಲನೆ ಮುಂದುವರಿಯಲಿದೆ ಎಂದು ಸ್ಥಳೀಯ ನ್ಯಾಯಾಲಯವು ತಿಳಿಸಿದ್ದು, ಅಡ್ವೊಕೇಟ್ ಕಮಿಷನರ್ ಅವರನ್ನು ಪದಚ್ಯುತಗೊಳಿಸುವಂತೆ ಮುಸ್ಲಿಂ ಮತೀಯರ ಕಡೆಯವರು ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆ ಮೇ 9ರಂದು ನಡೆಯಲಿದೆ.

ವಿವಾದಿತ ಜ್ಞಾನವ್ಯಾಪಿ ಮಸೀದಿಯು ಹಿಂದೂ ದೇಗುಲವನ್ನು ನಾಶ ಮಾಡಿ ಅದರ ಅವಶೇಷಗಳಿಂದ ಮಾಡಲ್ಪಟ್ಟಿದೆ ಹಾಗು ಹಿಂದೂ ದೇವಾಲಯದ ಕುರುಹುಗಳು ಅಲ್ಲಲ್ಲಿ ಕಾಣಸಿಗುತ್ತದೆ ಎಂದು ಈ ಹಿಂದೆಯೇ ಹಲವರು ಆರೋಪಿಸಿದ್ದು ಇದೀಗ ಮಸೀದಿ ಸಂಕೀರ್ಣದಲ್ಲಿರುವ ಮಾತೆ ಶೃಂಗಾರ ಗೌರಿ ಸ್ಥಳದ ಬಗ್ಗೆ ಹಿಂದೂ ಭಕ್ತರೊಬ್ಬರು ನ್ಯಾಯಾಲಯಕ್ಕೆ ಹೋದ ಪರಿಣಾಮ ನ್ಯಾಯಾಲಯ ಸ್ಥಳದ ವಿಡಿಯೋಗ್ರಾಫಿಕ್ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.

1991 ರಲ್ಲಿ ವಾರಣಾಸಿ ನ್ಯಾಯಾಲಯದ ಮುಂದೆ ಸ್ಥಳೀಯ ಪುರೋಹಿತರು ಸೇರಿ ಹಲವರು ಜ್ಞಾನವಾಪಿ ಮಸೀದಿ ಪ್ರದೇಶದಲ್ಲಿ ಪೂಜೆ ಮಾಡಲು ಅನುಮತಿ ಕೋರಿದಾಗಿನಿಂದ ಈ ಜನವ್ಯಾಪಿ ಮಸೀದಿ ವಿವಾದಿತ ಪ್ರದೇಶವಾಗಿದೆ. ಭಾರತವನ್ನಾಳಿದ ಮುಸ್ಲಿಂ ಮೊಘಲ್ ರಾಜ ಔರಂಗಜೇಬನ ಆದೇಶದ ಮೇರೆಗೆ 17 ನೇ ಶತಮಾನದಲ್ಲಿ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ನಾಶ ಮಾಡಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಅರ್ಜಿದಾರರಲ್ಲಿ ಒಬ್ಬರಾದ ರಸ್ತೋಗಿ ಅವರು 1991 ರಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದರು ಮತ್ತು ಅವರು ತಮ್ಮ ಅರ್ಜಿಯಲ್ಲಿ ಮಹಾರಾಜ ವಿಕ್ರಮಾದಿತ್ಯ ಸುಮಾರು 2,050 ವರ್ಷಗಳ ಹಿಂದೆ ಪ್ರಸ್ತುತ ಮಸೀದಿ ಇರುವ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಿದರು ಉಲ್ಲೇಖಿಸಿದ್ದರು. ಜ್ಞಾನವಾಪಿ ಮಸೀದಿಯನ್ನು ಕೆಡವಬೇಕು ಮತ್ತು ಹಿಂದೂಗಳಿಗೆ ಸಂಪೂರ್ಣ ಜಮೀನಿನ ಮಾಲೀಕತ್ವವನ್ನು ನೀಡಬೇಕು, ಜೊತೆಗೆ ಮಸೀದಿಯೊಳಗೆ ಪೂಜೆ ಮಾಡುವ ಹಕ್ಕನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದರು. ಇದಲ್ಲದೆ, ಜ್ಞಾನವಾಪಿ ಮಸೀದಿಯನ್ನು ಭಾಗಶಃ ಪಾಳುಬಿದ್ದಿರುವ ದೇವಾಲಯದ ಮೇಲೆ ನಿರ್ಮಿಸಲಾಗಿರುವುದರಿಂದ, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ ಅನ್ವಯಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್‌ಗೆ ಮಾರ್ಚ್ 2019 ರಲ್ಲಿ ಶಂಕುಸ್ಥಾಪನೆ ಮಾಡಿದ ಸಂದರ್ಭ ಅಕ್ಟೋಬರ್ 2019 ರಲ್ಲಿ ಕಾರಿಡಾರ್ ನಿರ್ಮಾಣದ ಭಾಗವಾಗಿ ಗ್ಯಾನವಾಪಿ ಮಸೀದಿಯ ಗೇಟ್ ಸಂಖ್ಯೆ 4ರ ಬಳಿ ಗುತ್ತಿಗೆದಾರರೊಬ್ಬರು ಮಸೀದಿಯ ಚಬೂತ್ರವನ್ನು ತೆಗೆದುಹಾಕಿದರು. ಇದು ಸ್ಥಳದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿತು. ಸ್ಥಳೀಯ ಮುಸ್ಲಿಮರು ಪ್ರತಿಭಟನೆ ನಡೆಸಿದ ನಂತರ ಗುತ್ತಿಗೆದಾರರು ರಾತ್ರೋರಾತ್ರಿ ಕಟ್ಟಡವನ್ನು ಮರು ನಿರ್ಮಾಣ ಮಾಡಿ ಕೊಟ್ಟರು.

ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ಒಂದು ತಿಂಗಳ ನಂತರ, ಡಿಸೆಂಬರ್ 2019 ರಲ್ಲಿ ಜ್ಞಾನವಾಪಿ ಮಸೀದಿಯ ಪುರಾತತ್ವ ಮೌಲ್ಯಮಾಪನವನ್ನು ಕೋರಿ ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ್ ಪರವಾಗಿ ವಕೀಲ ವಿಜಯ್ ಶಂಕರ್ ರಸ್ತೋಗಿ ಹೊಸ ಅರ್ಜಿಯನ್ನು ಸಲ್ಲಿಸಿದರು.

ಪ್ರಸ್ತುತ ಪ್ರಕರಣದಲ್ಲಿ, ದೆಹಲಿಯ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಅವರು ಏಪ್ರಿಲ್ 18, 2021 ರಂದು ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ದೇವರಿಗೆ ಪೂಜೆ ಮಾಡಲು ಮತ್ತು ಆಚರಣೆಗಳನ್ನು ಮಾಡಲು ಅನುಮತಿ ಕೋರಿ ಮೊಕದ್ದಮೆ ಹೂಡಿದ್ದರು. ಹಾಗು ಸ್ಥಳದಲ್ಲಿರುವ ನಂದಿ ಹಾಗು ಇತರೆ ಹಿಂದೂ ಪ್ರತಿಮೆಗಳಿಗೆ ಹಾನಿ ಮಾಡದಂತೆ ರಕ್ಷಣೆ ಕೋರಿದ್ದರು.

ಅತ್ಯಂತ ಸೂಕ್ಷ್ಮವಾದ ಜ್ಞಾನವಾಪಿ ಮಸೀದಿಯ ಹೊರಭಾಗದ ಗೋಡೆಯೊಳಗೆ ಶೃಂಗಾರ್ ಗೌರಿ ದೇವಿಯ ಚಿತ್ರವಿದೆ. ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಮಸೀದಿಯ ಭದ್ರತೆಯನ್ನು ಬಿಗಿಗೊಳಿಸಿದ ಬಳಿಕ ಭಕ್ತರ ನಿಯಮಿತ ಪ್ರವೇಶವನ್ನು ನಿಲ್ಲಿಸಲಾಯಿತು. ಚೈತ್ರ ನವರಾತ್ರಿಯ ನಾಲ್ಕನೇ ದಿನದಂದು ಮಾತ್ರ ಈ ದೇವರನ್ನು ಪೂಜಿಸಲು ಅನುಮತಿ ನೀಡಲಾಯಿತು.

ಶೃಂಗಾರ್ ಗೌರಿ ಆರಾಧನೆಯ ಪ್ರಕರಣದಲ್ಲಿ, ವಾರಣಾಸಿಯ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ನ್ಯಾಯಾಲಯವು ಏಪ್ರಿಲ್ 26, 2022 ರಂದು ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣ ಮತ್ತು ಇತರ ಶೃಂಗಾರ್ ಗೌರಿ ದೇವಸ್ಥಾನದ ಸ್ಥಳದಲ್ಲಿ ವಕೀಲ ಕಮಿಷನರ್ ಮೂಲಕ ವೀಡಿಯೊಗ್ರಫಿಗೆ ಆದೇಶಿಸಿತ್ತು. ಮತ್ತು ಇದನ್ನು ಈದ್ ಬಳಿಕ ಮೇ 10ರ ಒಳಗೆ ನಡೆಸುವಂತೆ ಹೇಳಿತ್ತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments