HomeNationalಕೇಂದ್ರ ಬಜೆಟ್: ಇಲ್ಲಿವೆ ಪ್ರಮುಖಾಂಶಗಳು ; ಸಂಕ್ಷಿಪ್ತ ವಿವರಣೆ

ಕೇಂದ್ರ ಬಜೆಟ್: ಇಲ್ಲಿವೆ ಪ್ರಮುಖಾಂಶಗಳು ; ಸಂಕ್ಷಿಪ್ತ ವಿವರಣೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವ ಕೇಂದ್ರ ಸರಕಾರ ಜನಪ್ರಿಯ ಯೋಜನೆಗಳ ಘೋಷಣೆ ಮಾಡದೇ ಇದ್ದುದರಲ್ಲೇ ಉತ್ತಮಪಡಿಸುವಲ್ಲಿ ಚಿತ್ತ ನೆಟ್ಟಿದೆ. ಈ ಸಾಲಿನ ಬಜೆಟಿನ ಪ್ರಮುಖ ಅಂಶಗಳು ಹೀಗಿವೆ.

ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು 2000 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವ ಬಜೆಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು 20 ಸಾವಿರ ಕಿಲೋ ಮೀಟರ್ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ.

ಹಳ್ಳಿ ಹಳ್ಳಿಗೂ ಬರಲಿದೆ ಇಂಟರ್ನೆಟ್. ಫೈಬರ್ ನೆಟ್ ಅನ್ನು ವಿಸ್ತರಿಸುವುದರ ಜತೆಗೆ ಇದೇ ವರ್ಷ 5ಜಿ ತಂತ್ರಜ್ಞಾನದ ಬ್ಯಾಂಡ್ ಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಬೆಂಗಳೂರು ಸೇರಿ 13 ನಗರಗಳಲ್ಲಿ 5ಜಿ ಸೇವೆ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಪೋಸ್ಟ್ ಆಫೀಸಿನಲ್ಲಿ ಬ್ಯಾಂಕುಗಳ ಲಿಂಕ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪೋಸ್ಟ್ ಆಫೀಸಿನಿಂದಲೇ ಉಳಿದ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ನೆಫ್ಟ್, ಆರ್ಟಿಜಿಎಸ್ ಸೇರಿದಂತೆ ಬ್ಯಾಂಕಿಂಗ್ ಸೇವೆಯನ್ನು ಪೋಸ್ಟ್ ಆಫೀಸಿನಲ್ಲಿ ಪಡೆಯಬಹುದು.

ಸೋಲಾರ್ ವಿದ್ಯುತ್ ಗೆ ಆದ್ಯತೆ. ಸೋಲಾರ್ ವಿದ್ಯುತ್ ಕ್ಷೇತ್ರಕ್ಕೆ ಈ ಸಾಲಿನ ಬಜೆಟಿನಲ್ಲಿ 19,500 ಕೋಟಿ ಮೀಸಲಿಡಲಾಗಿದ್ದು 2030ರ ವೇಳೆಗೆ 280 ಗಿಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.

ನದಿಗಳ ಜೋಡಣೆಗೆ ಅಸ್ತು. ಕಾವೇರಿ -ಪೆನ್ನಾನ್, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾನ್ ಸೇರಿ ಒಟ್ಟು 5 ನದಿ ಜೋಡಣೆ ಯೋಜನೆಗಳಿಗೆ ನಿರ್ಧರಿಸಲಾಗಿದೆ.

ನವೋದ್ಯಮಕ್ಕೆ ಆದ್ಯತೆ ನೀಡಲಾಗಿದ್ದು ಆತ್ಮ ನಿರ್ಭರದಡಿ 60 ಲಕ್ಷ ಉದ್ಯೋಗ ಸೃಷ್ಟಿ ಗುರಿ ಇರಿಸಲಾಗಿದೆ. ಅನಿಮೇಷನ್, ಗ್ರಾಫಿಕ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಲು ಬಜೆಟಿನಲ್ಲಿ ಅವಕಾಶ ಕೊಡಲಾಗಿದೆ.

ಡಿಜಿಟಲೀಕರಣಕ್ಕೆ ಈ ಬಾರಿಯ ಬಜೆಟಿನಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಸ್ಥಾಪನೆ, ಶಿಕ್ಷಣವನ್ನು ಡಿಜಿಟಲೀಕರಣಗೊಳಿಸಲು ಡಿಜಿಟಲ್ ಯೂನಿವರ್ಸಿಟಿ, ಇ-ವಿದ್ಯಾ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ 200 ಟಿವಿ ಚಾನಲ್ಸ್, ಡಿಜಿಟಲ್ ಇಂಡಿಯಾದ ಭಾಗವಾಗಿ ಇನ್ನು ಮುಂದೆ ಇ-ಪಾಸ್ಪೋರ್ಟ್ ಬರಲಿದೆ.

ಅತ್ತ್ಯುತ್ತಮ ಮೂಲ ಸೌಕರ್ಯ, ಆಡಿಯೋ ವಿಶುವಲ್ ಸಾಧನಗಳೊಂದಿಗೆ 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ ಏರಲಿವೆ.

ರೈತರ ಅನುಕೂಲಕ್ಕಾಗಿ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ , ಕ್ರಿಮಿ ನಾಶಕ ಸಿಂಪಡಣೆಗಾಗಿ ಕಿಸಾನ್ ಡ್ರೋನ್, ಪಿಎಂ ಆವಾಸ್ ಯೋಜನೆಯಡಿಯಲ್ಲಿ 80 ಲಕ್ಷ ಮನೆ ನಿರ್ಮಾಣ ಗುರಿ, ಹರ್ ಘರ್-ನಲ್ ಜಲ್ ಯೋಜನೆಯಡಿಯಲ್ಲಿ 3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಸರಬರಾಜು ಈ ಸಾಲಿನ ಬಜೆಟಿನ ಉಳಿದ ಪ್ರಮುಖ ಅಂಶಗಳು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments