HomeNationalಹುಬ್ಬಳ್ಳಿ ಹಿಂಸಾಚಾರ: ಪ್ರಮುಖ ಆರೋಪಿ ಮೌಲ್ವಿ ವಸೀಂ ಪಠಾಣ್ ಬಂಧನ, ಹೊಸ ಕತೆ ಹೇಳುತ್ತಿರುವ ಮೌಲ್ವಿ

ಹುಬ್ಬಳ್ಳಿ ಹಿಂಸಾಚಾರ: ಪ್ರಮುಖ ಆರೋಪಿ ಮೌಲ್ವಿ ವಸೀಂ ಪಠಾಣ್ ಬಂಧನ, ಹೊಸ ಕತೆ ಹೇಳುತ್ತಿರುವ ಮೌಲ್ವಿ

ಹುಬ್ಬಳ್ಳಿ: ಹುಬ್ಬಳ್ಳಿಯ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮೌಲ್ವಿ ವಸೀಮ್ ಪಠಾಣ್ ನನ್ನು ರಾಜ್ಯ ಪೊಲೀಸರು ಬುಧವಾರ ಮುಂಬೈ ಅಲ್ಲಿ ಬಂಧಿಸಿದ್ದಾರೆ. ಈತ ಪ್ರಕರಣದ ಪ್ರಮುಖ ಸೂತ್ರಧಾರನಾಗಿದ್ದು ಪೊಲೀಸ್ ಜೀಪು ಮೇಲೆ ನಿಂತು ಘೋಷಣೆ ಕೂಗುತ್ತ ಜನರಿಂದ ಘೋಷಣೆ ಕೂಗಿಸುತ್ತ ಪ್ರಚೋದನೆ ಮಾಡುತ್ತಿದ್ದುದು ಈಗಾಗಲೇ ಆ ಸಂದರ್ಭ ಶೂಟ್ ಮಾಡಲಾದ ವಿಡಿಯೋದಲ್ಲಿ ಸಾಬೀತಾಗಿದೆ. ಆಗಿದ್ದರೂ ಬಂಧನಕ್ಕೂ ಸ್ವಲ್ಪ ಸಮಯ ಮೊದಲು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಮೌಲ್ವಿ ನಾನು ಜನರನ್ನು ಸಮಾಧಾನ ಮಾಡುತ್ತಿದ್ದೆ ಎಂದು ಕತೆ ಕಟ್ಟುತ್ತಿದ್ದಾನೆ. ವಿಚಾರಣೆಯಲ್ಲೂ ಇದನ್ನೇ ಹೇಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಸಮಾಜದ ಶಾಂತಿ ಕದಡಿ, ಸಾರ್ವಜನಿಕ ಆಸ್ತಿ ಪಾಸ್ತಿ ನಾಶಕ್ಕೆ ಕಾರಣನಾದ ಮೌಲ್ವಿಯನ್ನು ಕರ್ನಾಟಕ ಪೊಲೀಸರು ಆತನ ಕುತ್ತಿಗೆ ಹಿಡಿದು ಮುಂಬೈಯಿಂದ ಎಳೆದು ತಂದಿದ್ದಾರೆ. ರಾಜ್ಯ ಪೊಲೀಸರು ಮುಂಬೈಗೆ ಬಂದಿದ್ದಾರೆ ಎಂಬ ಸುಳಿವು ಸಿಕ್ಕ ಕೂಡಲೇ ತಾನಿನ್ನು ಸಿಕ್ಕಿ ಬೀಳುವುದು ಖಂಡಿತ ಎಂದು ಅರಿವಾದೊಡನೆ ನಾನೇನು ಮಾಡಿಲ್ಲ ಎಂಬಂತೆ ವಿಡಿಯೋ ಮಾಡಿ ಹರಿಯ ಬಿಟ್ಟು ಅಮಾಯಕನಂತೆ ಪೋಸು ಕೊಡುವ ಕೆಲಸ ಮಾಡಿದ್ದಾನೆ.

ವಸೀಂ ಪಠಾಣ್ ಪೊಲೀಸ್ ಕಮಿಷನರ್ ವಾಹನದ ಮೇಲೆ ನಿಂತು ಗುಂಪನ್ನು ಪ್ರಚೋದಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ವೈರಲ್ ಆಗಿದೆ. ಘಟನೆಯ ನಂತರ ಇಡೀ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು ಏಪ್ರಿಲ್ ೨೩ರ ವರೆಗೆ ಮುಂದುವರೆಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments