National

ಪ್ರವಾದಿ ಇಂದು ಬದುಕಿದ್ದರೆ ಈ ಮತಾಂಧ ಮುಸ್ಲಿಮರ ಹುಚ್ಚುತನ ನೋಡಿ ಬೆಚ್ಚಿ ಬೀಳುತ್ತಿದ್ದರು: ತಸ್ಲೀಮಾ ನಸ್ರಿನ್

ನವದೆಹಲಿ: ವಿಶ್ವದಾದ್ಯಂತ ಮುಸ್ಲಿಂ ದೇಶಗಳಲ್ಲಿ ಪ್ರವಾದಿ ಹೇಳಿಕೆ ಕುರಿತ ಪ್ರತಿಭಟನೆ ಹಾಗು ಭಾರತದಲ್ಲಿ ಮತಾಂಧರು ನಡೆಸುತ್ತಿರುವ ಹುಚ್ಚಾಟಗಳನ್ನು ನೋಡಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ದಿಗ್ಭ್ರಮೆ ವ್ಯಕತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಒಂದು ವೇಳೆ ಈಗ ಇದ್ದಿದ್ದರೆ ಪ್ರಪಂಚದಾದ್ಯಂತದ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಆಘಾತಕ್ಕೊಳಗಾಗುತ್ತಿದ್ದರು’ ಎಂದು ತಸ್ಲೀಮಾ ಹೇಳಿದ್ದಾರೆ.

ಇದಕ್ಕೂ ಮೊದಲು, ತಸ್ಲೀಮಾ ನಸ್ರೀನ್ ಅವರು ‘ಯಾರೂ ವಿಮರ್ಶೆಗಿಂತ ಮೇಲಲ್ಲ, ದೇವರೂ ಕೂಡಾ ಅಲ್ಲ’ ಎಂದು ಹೇಳಿದರು. “ಯಾರೂ ವಿಮರ್ಶೆಗಿಂತ ಮೇಲಲ್ಲ, ಮಾನವ, ಸಂತ, ಪ್ರವಾದಿ, ದೇವರೂ ಕೂಡ ಅಲ್ಲ. ಜಗತ್ತನ್ನು ಉತ್ತಮ ಸ್ಥಳವಾಗಿಸಲು ವಿಮರ್ಶಾತ್ಮಕ ಪರಿಶೀಲನೆ ಅಗತ್ಯ” ಎಂದು ತಸ್ಲೀಮಾ ನಸ್ರಿನ್ ಅವರು ಟ್ವೀಟ್ ಮಾಡಿದ್ದರು.

ಶುಕ್ರವಾರ ನಮಾಜ್ ಬಳಿಕ ಭಾರತದ ಹಲವಾರು ರಾಜ್ಯಗಳಲ್ಲಿ ಭುಗಿಲೆದ್ದ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಲೇಖಕರ ಹೇಳಿಕೆಗಳು ಬಂದಿವೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version