
ನವದೆಹಲಿ : ಭಾರತೀಯ ವಿದ್ಯಾರ್ಥಿಗಳ ವೀಸಾ ತಡೆ ಹಿಡಿದ ಕ್ರಮಕ್ಕೆ ಪ್ರತಿಯಾಗಿ ಭಾರತ ಚೀನೀಯರ ಪ್ರವಾಸೀ ವೀಸಾವನ್ನು ಅಮಾನತು ಮಾಡಿದೆ. ಈ ಮೂಲಕ ಚೀನಾಕ್ಕೆ ಅವರದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದೆ.
ಚೀನಾದಲ್ಲಿ ಅಧ್ಯಯನ ನಡೆಸುತ್ತಿದ್ದ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಮರಳಲು ಅವಕಾಶ ನೀಡದ ಕಾರಣ ಭಾರತ ಈ ನಿರ್ಧಾರ ಕೈಗೊಂಡಿದೆ. ಕೊರೊನಾದಿಂದಾಗಿ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾದಿಂದ ಮರಳಿದ್ದರು. ಕೋರೋಣ ಇಳಿಮುಖದ ಬಳಿಕ ಈ ವಿದ್ಯಾರ್ಥಿಗಳು ಚೀನಾಕ್ಕೆ ಹಿಂತಿರುಗಬೇಕಾಗಿತ್ತು. ಆದರೆ ಚೀನಾದ ಆಡಳಿತವು ಈ ವಿದ್ಯಾರ್ಥಿಗಳನ್ನು ವೇಯ್ಟಿಂಗ್ ಲಿಸ್ಟ್ ನಲ್ಲಿ ಇರಿಸಿದೆ.
ಚೀನಾದ ಪ್ರಜೆಗಳಿಗೆ ಭಾರತ ನೀಡುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಐಎಟಿಎ ತಿಳಿಸಿದೆ. ಆದರೂ ಚೀನಾ ನಾಗರಿಕರಿಗೆ ವ್ಯಾಪಾರ, ಉದ್ಯೋಗ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ನೀಡಲಾಗುತ್ತಿದೆ.












































