National

ಜಮ್ಮು ಮತ್ತು ಕಾಶ್ಮೀರ: ಕಳೆದ 12 ಗಂಟೆಗಳಲ್ಲಿ 5 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಚಿತ್ರದಲ್ಲಿ: ಜೈಷ್ ಉಗ್ರ ಜಾಹಿದ್ ವಾನಿ ಹಾಗು ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಭಾರೀ ಕಾರ್ಯಾಚರಣೆ ನಡೆಸಿ 12 ಗಂಟೆಗಳ ಅವಧಿಯಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಒಟ್ಟು 5 ಭಯೋತ್ಪಾದಕರನ್ನು ಹೊಡೆದುರುಳಿಸಿದೆ.

ಸೇನೆಯ ಗುಂಡಿಗೆ ಬಲಿಯಾದವರಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಜಾಹಿದ್ ವಾನಿ ಸೇರಿದ್ದಾನೆಂದು ತಿಳಿದುಬಂದಿದೆ.

ಜೈಶ್ ಭಯೋತ್ಪಾದಕ ಜಾಹಿದ್ ವಾನಿ 2019ರ ಫೆಬ್ರುವರಿ 14ರಂದು 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದ ಲೆಟ್‌ಪುರ ಘಟನೆಯಲ್ಲಿ ಭಾಗಿಯಾಗಿದ್ದ. ಕುಲ್ಗಾಮ್ ಜಿಲ್ಲೆಯಲ್ಲಿ ಪೋಲೀಸರ ಮೇಲೆ ಧಾಳಿ ಮಾಡಿ ಹತ್ಯೆ ನಡೆಸಿದ ನಂತರ ಈಗ ಪುಲ್ವಾಮಾದ ನೈರಾ ಪ್ರದೇಶದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯ ಸೇನೆ ಮತ್ತು ಪೊಲೀಸ್ ತಂಡ ಸ್ಥಳವನ್ನು ಸುತ್ತುವರೆದಿದೆ.

Exit mobile version