
ಕ್ಲೈವ್ (ಉಕ್ರೇನ್): ಉಕ್ರೇನ್ ಮೇಲೆ ಬಲಿಷ್ಠ ರಷ್ಯಾದ ಆಕ್ರಮಣದ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶ ತೊರೆಯುವಂತೆ ಭಾರತೀಯ ನಾಗರಿಕರಿಗೆ ರಾಯಭಾರ ಕಚೇರಿ ಸೂಚಿಸಿದೆ. ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರನ್ನು ಅದರಲ್ಲೂ ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಮನೆಗೆ ಮರಳಲು ಕೇಳಿಕೊಂಡಿದೆ.
ಈ ಕುರಿತು ಹೇಳಿಕೆ ಹೊರಡಿಸಿರುವ ಕ್ಲೈವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, “ಉಕ್ರೇನ್ನಲ್ಲಿನ ಪರಿಸ್ಥಿತಿಯ ಅನಿಶ್ಚಿತತೆಯಿಂದ ಕೂಡಿದ್ದು ಸುರಕ್ಷತೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳು, ಇಲ್ಲಿ ಉಳಿಯಲೇಬೇಕಾದ ಅನಿವಾರ್ಯತೆ ಇಲ್ಲದ ವಿದ್ಯಾರ್ಥಿಗಳು ಪರಿಸ್ಥಿತಿ ತಿಳಿಗೊಳ್ಳುವ ತನಕ ಉಕ್ರೇನ್ ನಿಂದ ಹೊರಡಲು ಪರಿಗಣಿಸಬಹುದು” ಎಂದು ತಿಳಿಸಿದೆ.
ಉಕ್ರೇನ್ ದೇಶದ ಗಡಿಯಲ್ಲಿ ರಷ್ಯಾದ ಪಡೆಗಳ ಜಮಾವಣೆಯಲ್ಲಿನ ಹೆಚ್ಚಳವನ್ನು ಗಮನಿಸಿ, ಕೈವ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಪಶ್ಚಿಮ ಉಕ್ರೇನಿಯನ್ ನಗರವಾದ ಎಲ್ವಿವ್ಗೆ ಸ್ಥಳಾಂತರಿಸುವುದಾಗಿ ಅಮೇರಿಕ ಘೋಷಿಸಿದ ನಂತರ ಹಲವು ದೇಶಗಳು ತಮ್ಮ ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಬರಲು ಕೇಳಿಕೊಂಡಿವೆ.
ಇತರ ದೇಶಗಳಾದ ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಕೂಡ ತಮ್ಮ ಪ್ರಜೆಗಳನ್ನು ಉಕ್ರೇನ್ ಬಿಡುವಂತೆ ಕೇಳಿಕೊಂಡಿವೆ.












































