
ನವದೆಹಲಿ: ಭಾರತೀಯ ಸೇನೆ ಅರೇಬಿಯನ್ ಸಮುದ್ರದಲ್ಲಿ ಮತ್ತೆ ತನ್ನ ಪಾರಮ್ಯ ಮೆರೆದಿದ್ದು ಮತ್ತೊಮ್ಮೆ ಸೊಮಾಲಿಯಾ ಕಡಲ್ಗಳ್ಳರನ್ನು ಹೆಡೆಮುರಿ ಕಟ್ಟಿದೆ. ಸೊಮಾಲಿಯಾ ಕಡಲ್ಗಳ್ಳರು ಹೈಜಾಕ್ ಮಾಡಿದ್ದ ಇರಾನ್ ಮೂಲದ ಸರಕ ಸಾಗಾಣಿಕಾ ಹಡಗನ್ನು ಸತತ ಕಾರ್ಯಾಚರಣೆ ನಡೆಸಿ ಬಂಧಮುಕ್ತಗೊಳಿಸಿ ಹಡಗಿನಲ್ಲಿದ್ದ 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ ಮಾಡಿದೆ.
ಇರಾನ್ ದೇಶಕ್ಕೆ ಸೇರಿದ ಮೀನುಗಾರಿಕಾ ಹಡಗು ಅಲ್-ಕಂಬರ್ ಅನ್ನು ಸೊಮಾಲಿಯ ಕಡಲ್ಗಳ್ಳರು ಅಪಹರಿಸಿದ್ದರು. ಸುದ್ದಿ ತಿಳಿದ ಭಾರತೀಯ ನೌಕಾಪಡೆಯ ಐಎನ್ಎಸ್ ಸುಮೇಧಾ ಮತ್ತು ಐಎನ್ಎಸ್ ತ್ರಿಶೂಲ್ ನೌಕೆಗಳು ಅಲ್-ಕಂಬರ್ ಹಡಗನ್ನು ಸುತ್ತುವರೆದು ಸುಮಾರು 12 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿತು. ಕೊನೆಗೆ ಸೊಮಾಲಿಯಾ ಕಡಲ್ಗಳ್ಳರು ಭಾರತೀಯ ಸೇನೆಗೆ ಶರಣಾಗಬೇಕಾಯಿತು.
ಕಾರ್ಯಾಚರಣೆ ಬಳಿಕ ಹಡಗನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡೆದಿದ್ದು, ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು ಸುರಕ್ಷಿತ ಪ್ರದೇಶಕ್ಕೆ ಬೆಂಗಾವಲು ಮಾಡಲು ಭಾರತೀಯ ನೌಕಾಪಡೆಯ ತಜ್ಞ ತಂಡಗಳು ಪ್ರಸ್ತುತ ಹಡಗಿನ ಸಂಪೂರ್ಣ ನೈರ್ಮಲ್ಯ ಮತ್ತು ಸಮುದ್ರ ಯೋಗ್ಯತೆಯ ತಪಾಸಣೆಗಳನ್ನು ಕೈಗೊಳ್ಳುತ್ತಿವೆ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd












































