HomeNationalಉಗ್ರರ ಎನ್ಕೌಂಟರ್ ವೇಳೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದ 15 ಕಾಶ್ಮೀರಿ...

ಉಗ್ರರ ಎನ್ಕೌಂಟರ್ ವೇಳೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದ 15 ಕಾಶ್ಮೀರಿ ಮುಸ್ಲಿಮರ ಬಂಧನ

ಶ್ರೀನಗರ: ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ನಂತರ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ 15 ಜನ ಕಾಶ್ಮೀರಿ ಮುಸ್ಲಿಮರನ್ನು ಬಂಧಿಸಲಾಗಿದೆ.

ಶ್ರೀನಗರದ ನೌಗಮ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಎಚ್ಚರಿಕೆ ನೀಡಿದ್ದರೂ ಸ್ಥಳೀಯ ಗುಂಪೊಂದು ಪಡೆಗಳನ್ನು ಸಮೀಪಿಸಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿತು.

ಎನ್ಕೌಂಟರ್ ಬಳಿಕ ಭಯೋತ್ಪಾದಕರು ಬಿಟ್ಟು ಹೋಗಿರುವ ಯಾವುದೇ ಸ್ಫೋಟಕಗಳಿದ್ದ ಪಕ್ಷದಲ್ಲಿ ಅವಘಡ ಆಗದಂತೆ ಯಾವುದೇ ನಾಗರಿಕರನ್ನು ಆ ಪ್ರದೇಶದೊಳಗೆ ಬರದಂತೆ ಸೂಚನಾ ಫಲಕಗಳನ್ನು ಇಡಲಾಗಿತ್ತು. ಆದರೆ ಶಂಕರಾಪೋರ ವನಬಾಲ್‌ನ ಸುತ್ತಮುತ್ತಲಿನ ಪ್ರದೇಶಗಳಿಂದ ಜಮಾಯಿಸಿದ ಗುಂಪು ಕೈಯಲ್ಲಿ ಲಾಠಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆಗೆ ಯತ್ನ ನಡೆಸಿತು.

ಈ ಘಟನೆ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments