HomeNationalಜಮ್ಮು ಮತ್ತು ಕಾಶ್ಮೀರವು ಪ್ರಜಾಪ್ರಭುತ್ವ ನಿರ್ಣಯಕ್ಕೆ ಹೊಸ ಉದಾಹರಣೆಯಾಗಿದೆ: ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರವು ಪ್ರಜಾಪ್ರಭುತ್ವ ನಿರ್ಣಯಕ್ಕೆ ಹೊಸ ಉದಾಹರಣೆಯಾಗಿದೆ: ಪ್ರಧಾನಿ ಮೋದಿ

ಜಮ್ಮು: ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿರುವುದರಿಂದ ಜಮ್ಮು ಮತ್ತು ಕಾಶ್ಮೀರವು “ಪ್ರಜಾಪ್ರಭುತ್ವ”ದ ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಕಳೆದ ಎರಡು ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ 38,000 ಕೋಟಿ ರೂಪಾಯಿಗಳ ಖಾಸಗಿ ಹೂಡಿಕೆ ಬಂದಿದೆ. ಜತೆಗೆ ಅಧಿಕ ಸಂಖ್ಯೆಯ ಪ್ರವಾಸಿಗರನ್ನು ಕಂಡಿದೆ ಎಂದು ಹೇಳಿದರು.

ಜಮ್ಮುವಿನಿಂದ 17 ಕಿ.ಮೀ ದೂರದ ಸಾಂಬಾ ಜಿಲ್ಲೆಯ ಪಲ್ಲಿ ಗ್ರಾಮದಲ್ಲಿ “ರಾಷ್ಟ್ರೀಯ ಪಂಚಾಯತ್ ರಾಜ್” ದಿನದಂದು ಮೋದಿ ಮಾತನಾಡುತ್ತಿದ್ದರು. ದೇಶಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮೋದಿ ಅವರ ಭಾಷಣವನ್ನು ಪ್ರಸಾರ ಮಾಡಲಾಯಿತು. ಈ ಸಂದರ್ಭ
ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ 20,000 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಇಲ್ಲಿಯ ಜನರಿಗೆ ತಮ್ಮ ಸರ್ಕಾರವು 175 ಕೇಂದ್ರ ಕಾನೂನುಗಳು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದ್ದಾಗ ಈ ಪ್ರಯೋಜನಗಳಿಂದ ನೀವು ವಂಚಿತರಾಗಿದ್ದಿರಿ ಎಂದು ಮೋದಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments