National

ಶಿಕ್ಷಣ ಸಂಸ್ಥೆಗಳಲ್ಲಿ ಕಪ್ಪು ಹಣ ಸಂಗ್ರಹ: ಕೇರಳದ ಸಿಎಸ್ಐ ಚರ್ಚ್ ಮೇಲೆ ಇಡಿ ದಾಳಿ

ತಿರುವನಂತಪುರ: ಭ್ರಷ್ಟಾಚಾರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಸೋಮವಾರ ಕೇರಳದ ರಾಜಧಾನಿಯಲ್ಲಿರುವ ಮಟೀರ್ ಸ್ಮಾರಕ ಚರ್ಚ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಚರ್ಚ್‌ನ ಸರ್ವೋಚ್ಚ ನಾಯಕ ಬಿಷಪ್ ಎ ಧರ್ಮರಾಜ್ ರಸಾಲಂ ಅವರ ಕಚೇರಿಯನ್ನು ಹೊಂದಿರುವ ಸಿಎಸ್‌ಐ ದಕ್ಷಿಣ ಕೇರಳ ಡಯಾಸಿಸ್‌ನ ಪ್ರಧಾನ ಕಚೇರಿಯ ಮೇಲೂ ಇಡಿ ದಾಳಿ ನಡೆಸಿದೆ.

ಕಾರಕೋಣಂನಲ್ಲಿರುವ ಚರ್ಚ್ಅಧೀನಕ್ಕೆ ಒಳಪಟ್ಟ ವೈದ್ಯಕೀಯ ಕಾಲೇಜಿನಲ್ಲಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡುವ ನೆಪದಲ್ಲಿ ಭಾರೀ ಮೊತ್ತದ ಕಪ್ಪು ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಹಲವು ಕಡೆಗಳಲ್ಲಿ ಧಾಳಿ ನಡೆಸಲಾಗಿದ್ದು ಚರ್ಚ್‌ನ ಕಾರ್ಯದರ್ಶಿ ಟಿಟಿ ಪ್ರವೀಣ್ ಮತ್ತು ಕರಕೋಣಂನ ಸಿಎಸ್‌ಐ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಬೆನೆಟ್ ಅಬ್ರಹಾಂ ಅವರ ನಿವಾಸಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಯಿತು.

“ಇಡಿಯವರು ಇಂದು ಬೆಳಗ್ಗೆ 6.30ಕ್ಕೆ ಬಂದು ದಾಳಿ ಆರಂಭಿಸಿದರು. ಅವರು ಧಾಳಿ ಬಗ್ಗೆ ಮೊದಲೇ ನಮಗೆ ತಿಳಿಸಲಿಲ್ಲ. ವಿಚಾರಣೆ ನಡೆಯುತ್ತಿದೆ. ಬಿಷಪ್ ಅವರಿಗೆ ಒಂದು ಸಮ್ಮೇಳನದಲ್ಲಿ ಭಾಗವಹಿಸಲು ಇದೆ, ಇಡಿಯವರು ಹೋಗದೆ ಅವರು ಹೊರಡಲು ಸಾಧ್ಯವಾಗುತ್ತಿಲ್ಲ. ಅವರು ಹೋದರೆ ನಮಗೆ ಸಂತೋಷವಾಗಿದೆ”ಎಂದು ಕ್ರಿಶ್ಚಿಯನ್ ಶಿಕ್ಷಣ ಮಂಡಳಿಯ ನಿರ್ದೇಶಕ ಫಾ. ಸಿ ಆರ್ ಗಾಡ್ವಿನ್ ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version