HomeNationalಕಾಶ್ಮೀರದಲ್ಲಿ ಮುಸ್ಲಿಮೇತರರ ಹತ್ಯೆ: ಮನೆಮಠ ತೊರೆಯುತ್ತಿರುವ ಹಿಂದೂ ಸಿಖ್ ಕುಟುಂಬಗಳು

ಕಾಶ್ಮೀರದಲ್ಲಿ ಮುಸ್ಲಿಮೇತರರ ಹತ್ಯೆ: ಮನೆಮಠ ತೊರೆಯುತ್ತಿರುವ ಹಿಂದೂ ಸಿಖ್ ಕುಟುಂಬಗಳು

ಶ್ರೀನಗರ: ಇಲ್ಲಿನ ಸರಕಾರಿ ಶಾಲೆಯಲ್ಲಿ ಭಯೋತ್ಪಾದಕರು ಮತೀಯವಾಗಿ ಗುರುತಿಸುವಿಕೆಯ ಪರೇಡ್ ನಡೆಸಿ ಇಬ್ಬರು ಮುಸ್ಲಿಮೇತರರನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಜಮ್ಮು ಕಾಶ್ಮೀರದಲ್ಲಿ ಹಿಂದೂ ಪಂಡಿತರು ಹಾಗು ಸಿಖ್ ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಒಟ್ಟು ೫ ಮಂದಿ ಹಿಂದೂ ಸಿಖ್ ಸಮುದಾಯದವರನ್ನು ಹತ್ಯೆಗೈಯಲಾಗಿದ್ದು ಹಿಂದೂ ಹಾಗು ಸಿಖ್ ಸಮುದಾಯದ ಹಲವು ಕುಟುಂಬಗಳು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಗುಳೇ ಹೊರಟಿವೆ.

ಭಯೋತ್ಪಾದಕರು ಹಿಟ್ ಲಿಸ್ಟ್ ರಚಿಸಿಕೊಂಡಿದ್ದಾರೆ ಅನ್ನುವ ವದಂತಿಯೂ ಹರಿದಾಡುತ್ತಿದ್ದು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯ ಇತ್ತೀಚಿಗೆ ಸರಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಿಖ್ ಸಮುದಾಯದ ಶಾಲಾ ಪ್ರಿನ್ಸಿಪಾಲ್ ಸುಪಿಂದರ್ ಕೌರ್ ಹಾಗು ಹಿಂದೂ ಧರ್ಮದ ಶಿಕ್ಷಕ ದೀಪಕ್ ಚಾಂದ್ ಅವರನ್ನು ಕೊಂಡು ಹಾಕಲಾಗಿತ್ತು. ಜತೆಗೆ ಶ್ರೀನಗರ ಇಕ್ಬಾಲ್ ಪಾರ್ಕ್‌ನಲ್ಲಿರುವ ಬಿಂದ್ರೂ ಮೆಡಿಕೇಟ್ ಫಾರ್ಮಸಿಯ ಮಾಲೀಕರಾದ ಮಖನ್ ಲಾಲ್ ಬಿಂದ್ರೂ (70) ಅವರನ್ನೂ ಮುಸ್ಲಿಂ ಭಯೋತ್ಪಾದಕರು ಹತ್ಯೆಗೈದಿದ್ದು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯ ಬೆಚ್ಚಿ ಬೀಳುವಂತೆ ಮಾಡಿದೆ.

ಹಲವು ಕಾಶ್ಮೀರಿ ಪಂಡಿತರು 1990ರ ಸನ್ನಿವೇಶದ ಮರಳುವಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಆದಾಗ್ಯೂ ಕೇಂದ್ರಾಡಳಿತ ಪ್ರದೇಶದ ಆಡಳಿತವು ಅಲ್ಪಸಂಖ್ಯಾತರನ್ನು ಭಯಪಡದಂತೆ ಕೇಳಿಕೊಂಡಿದೆ. ಕಳೆದ 2 ದಿನಗಳಲ್ಲಿ ಸಂಜೆ 7 ಗಂಟೆಗೆಲ್ಲ ಹಿಂದೂ ಸಿಖ್ ಸಮುದಾಯದ ಅಂಗಡಿಗಳು ಮುಚ್ಚುತ್ತಿದ್ದು ರಾತ್ರಿ ಹೆಚ್ಚಿನ ಸಮಯ ಹೊರಗೆ ಕಳೆಯಲು ಧೈರ್ಯ ಮಾಡುತ್ತಿಲ್ಲ.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕರ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಹಾಗು ಭಯೋತ್ಪಾದಕರ ಮೂಲವನ್ನು ನಾಶಪಡಿಸುವ ಬಗ್ಗೆ ಹೇಳಿಕೊಂಡಿದ್ದು ಜನರು ಭಯಪಡದಂತೆ ಕೇಳಿಕೊಂಡಿದ್ದಾರೆ. ಅಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಇಂದು ಸಿನ್ಹಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments