
ನವದೆಹಲಿ: ಮುಸ್ಲಿಮರಲ್ಲಿನ ಬರೇಲ್ವಿ ಪಂಥದ ಮೌಲಾನಾ ಶಹಾಬುದ್ದೀನ್ ರಜ್ವಿ ಅವರು ಭಾರತದಲ್ಲಿನ ಮುಸ್ಲಿಮರು ದರಿದ್ರ ಸ್ಥಿತಿಯಲ್ಲಿದ್ದಾರೆ ಎಂದು ಹೇಳುವ ಬಿಬಿಸಿಯ ಷಡ್ಯಂತ್ರದ ಸ್ಟೋರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತವು ಮುಸ್ಲಿಮರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದೆ ಮತ್ತು ಯಾವುದೇ ತೊಂದರೆ ಇಲ್ಲ ಎಂದು ಈ ಸಂದರ್ಭ ಧರ್ಮಗುರು ಹೇಳಿದ್ದಾರೆ.
ಹಿಂದೂ ಪರ ಸಂಘಟನೆ ಆರ್ಎಸ್ಎಸ್ ಮುಖ್ಯಸ್ಥರು ಕೂಡ ಮುಸ್ಲಿಮರು ಕೈಜೋಡಿಸಿ ಕೆಲಸ ಮಾಡಲು ಬಯಸುತ್ತಾರೆ ಎಂದು ಭರವಸೆ ನೀಡಿದ್ದಾರೆ. ಆ ಕುರಿತು ಅವರ ಹೇಳಿಕೆಯನ್ನು ನಾವು ಪ್ರಶಂಸಿಸುತ್ತೇವೆ. ಬಿಬಿಸಿ ತನ್ನ ಸುಳ್ಳು ಮಾರ್ಗಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕು ಎಂದು ಮುಸ್ಲಿಂ ಧರ್ಮಗುರು ಹೇಳಿದರು.
2002 ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಪ್ರಶ್ನಿಸುವ ಸಾಕ್ಷ್ಯಚಿತ್ರವನ್ನು ಬಿಬಿಸಿ ಬಿಡುಗಡೆ ಮಾಡಿತ್ತು. ವಿರೋಧದ ಬಳಿಕ ಹಿಂತೆಗೆದುಕೊಂಡಿತ್ತು. ಇದು ಷಡ್ಯಂತ್ರದಿಂದ ಕೂಡಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದರು.












































