
ಕರಾಚಿ: ಪಾಕಿಸ್ತಾನದಲ್ಲಿ ದಿನೇ ದಿನೇ ಅಲ್ಪಸಂಖ್ಯಾತ ಹಿಂದೂಗಳ ದೇವಾಲಯಗಳ ಮೇಲೆ ಧಾಳಿ ಹೆಚ್ಚುತ್ತಿದ್ದು ಹಲವು ದೇಗುಲಗಳನ್ನು ನಾಶ ಮಾಡಲಾಗಿದೆ. ಇದೀಗ ಕರಾಚಿಯ ಒರಂಗಿ ಪ್ರದೇಶದಲ್ಲಿ ಬುಧವಾರ ಹಿಂದೂ ದೇವಾಲಯ ಒಂದನ್ನು ಧ್ವಂಸಗೊಳಿಸಲಾಗಿದೆ.
ಕರಾಚಿಯ ಕೋರಂಗಿ ಪ್ರದೇಶದಲ್ಲಿರುವ ಮಾರಿ ಮಾತಾ ಮಂದಿರದಲ್ಲಿರುವ ದೇವರ ವಿಗ್ರಹಗಳ ಮೇಲೆ ದಾಳಿ ನಡೆಸಲಾಗಿದೆ. ಈ ದೇವಾಲಯವು ಕೋರಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಆರರಿಂದ ಎಂಟು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಪ್ರವಾದಿ ಪೈಗಂಬರ್ ಬಗ್ಗೆ ಹೇಳಿಕೆ ನೀಡಿದರೆಂದು ಅಂತರರಾಷ್ಟ್ರೀಯವಾಗಿ ಭಾರತದ ಮೇಲೆ ಮುಗಿ ಬಿದ್ದಿರುವ ಅರಬ್ ಹಾಗು ಇತರ ಇಸ್ಲಾಮ್ ರಾಷ್ಟ್ರಗಳಂತೆ ಭಾರತವು ಇದೀಗ ಹಿಂದೂಗಳ ದೇಗುಲ ನಾಶ ಸಂಬಂಧ ಅಂತರರಾಷ್ಟ್ರೀಯವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































