National

ಒರಿಸ್ಸಾ: ಮಾವೋವಾದಿಗಳ ಟ್ರ್ಯಾಪ್’ಗೆ 3 ಸಿಆರ್‌ಪಿಎಫ್ ಯೋಧರು ಹುತಾತ್ಮ

ಸಾಂದರ್ಭಿಕ ಚಿತ್ರ

ಭುವನೇಶ್ವರ: ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ಮಾವೋವಾದಿಗಳ ಹಿಂಸಾಚಾರದ ಮೂರು ವರ್ಷಗಳ ವಿರಾಮ ಮಂಗಳವಾರ ಕೊನೆಗೊಂಡಿದ್ದು, ಹೊಂಚು ಹಾಕಿ ಮಾಡಿದ ಧಾಳಿಯಿಂದಾಗಿ ಮೂವರು ಸಿಆರ್‌ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದಾರೆ. ಮತ್ತು ಅನಿರ್ದಿಷ್ಟ ಸಂಖ್ಯೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸಿಆರ್‌ಪಿಎಫ್ ತಂಡವು ಟ್ರ್ಯಾಪ್ ಗೆ ಸಿಲುಕಿದಾಗ ಪಟ್ಟಧಾರ ಅರಣ್ಯದೊಳಗೆ ಕಾದು ಕುಳಿತಿದ್ದ ಮಾವೋವಾದಿಗಳು (ನಕ್ಸಲರು) ಧಾಳಿ ಆರಂಭಿಸಿದರು. ಉತ್ತರಪ್ರದೇಶ ಮತ್ತು ಹರಿಯಾಣದ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಾದ ಶಿಶುಪಾಲ್ ಸಿಂಗ್ ಮತ್ತು ಶಿವಪಾಲ್ ಮತ್ತು ಬಿಹಾರ ಮೂಲದ ಕಾನ್‌ಸ್ಟೆಬಲ್ ಧರ್ಮೇಂದ್ರ ಕುಮಾರ್ ಸಿಂಗ್ ಹತ್ಯೆಗೀಡಾದರು.

ಸುನಬೇಡ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನ ಸ್ಥಳದಲ್ಲಿ ಮತ್ತು ಭೈಂಸದಾನಿ, ಪಟಧಾರದ ಎರಡು ಸಿಆರ್‌ಪಿಎಫ್ ಶಿಬಿರಗಳ ನಡುವೆ ಮಾವೋವಾದಿಗಳಿಂದ ಗುಂಡಿನ ದಾಳಿ ನಡೆದಿದೆ ಎಂದು ಐಜಿಪಿ (ಕಾರ್ಯಾಚರಣೆ) ಅಮಿತವ್ ಠಾಕೂರ್ ತಿಳಿಸಿದ್ದಾರೆ.

Exit mobile version