National

ಜ್ಞಾನವಾಪಿ ಮಸೀದಿಯಲ್ಲಿನ ‘ಶಿವಲಿಂಗ’ಕ್ಕೆ ಪೂಜೆ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟಿನಲ್ಲಿ ಹೊಸ ಅರ್ಜಿ

ವಾರಣಾಸಿ: ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿ ಜಾಗದಲ್ಲಿ ಇತ್ತೀಚೆಗೆ ಪತ್ತೆಯಾದ ‘ಶಿವಲಿಂಗ’ಕ್ಕೆ ಹಿಂದೂಗಳಿಗೆ ಧಾರ್ಮಿಕ ಆಚರಣೆಗಳನ್ನು ಮಾಡಲು ಆದೇಶ ನೀಡುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಲಾಗಿದೆ.

ವರದಿಗಳ ಪ್ರಕಾರ, ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ಸ್ಥಳದ ಅಧ್ಯಕ್ಷ ರಾಜೇಶ್ ಮಣಿ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದು, “ಶ್ರಾವಣ” ಮಾಸ ಪ್ರಾರಂಭವಾಗುವುದರಿಂದ ಹಿಂದೂಗಳು ಪೂಜೆ ಸಲ್ಲಿಸಲು ಮತ್ತು ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಬಹುದು ಎಂದು ವಾದಿಸಿದ್ದಾರೆ.

“ಅರ್ಜಿದಾರರು ವಾರಣಾಸಿಯ ಸಂಬಂಧಪಟ್ಟ ನ್ಯಾಯಾಲಯವು ಹೊರಡಿಸಿದ ಆದೇಶದ ಅನುಸಾರವಾಗಿ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಕಂಡು ಬಂದ`ಶಿವಲಿಂಗಕ್ಕೆ ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಲು ಬಯಸುತ್ತಾರೆ” ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.

Exit mobile version