
ನವದೆಹಲಿ: ದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ 1.3 ಲಕ್ಷ ಕೋಟಿ ಜಿ ಎಸ್ ಟಿ ಸಂಗ್ರಹವಾಗಿದ್ದು ಆಶಾದಾಯಕ ಬೆಳವಣಿಗೆ ಎನಿಸಿದೆ. ಇದು ಆರ್ಥಿಕತೆ ಚೇತರಿಕೆಯ ಹಾದಿಯನ್ನು ಹಿಡಿದರುವುದರ ಮುನ್ಸೂಚನೆಯಾಗಿದೆ .
ಇದು ಇಲ್ಲಿಯವರೆಗಿನ ಯಾವುದೇ ತಿಂಗಳ ಎರಡನೆಯ ಅತಿ ಹೆಚ್ಚಿನ ಜಿ ಎಸ್ ಟಿ ಸಂಗ್ರಹ ಎನಿಸಿಕೊಂಡಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಸಂಗ್ರಹವಾಗಿದ್ದ 1.41 ಲಕ್ಷ ಕೋಟಿ ಇಲ್ಲಿಯವರೆಗಿನ ಅತಿ ಹೆಚ್ಚಿನ ಜಿಎಸ್ಟಿ ಸಂಗ್ರಹವಾಗಿದೆ . ಹೆಚ್ಚಿದ ಆರ್ಥಿಕ ಚಟುವಟಿಕೆ ಹಾಗೂ ತೆರಿಗೆ ವಂಚನೆಯನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳು ಜಿ ಎಸ್ ಟಿ ಸಂಗ್ರಹದಲ್ಲಿ ಹೆಚ್ಚುವರಿಯನ್ನು ಕಾಣಲು ಸಾಧ್ಯವಾಗಿಸಿವೆ.
ಎರಡನೇ ಬಾರಿಯ ಲಾಕ್ಡೌನ್ ನಂತರ ಸತತ ನಾಲ್ಕು ತಿಂಗಳುಗಳಿಂದ ಜಿ ಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ರೂ ಗಳನ್ನು ದಾಟುತ್ತಿರುವುದು ಇಲ್ಲಿ ಗಮನಾರ್ಹ. ಮುಂದಿನ ನವೆಂಬರ್ ತಿಂಗಳಲ್ಲಿ ಅತೀ ಹೆಚ್ಚಿನ ಜಿ ಎಸ್ ಟಿ ಸಂಗ್ರಹವನ್ನು ನಿರೀಕ್ಷಿಸಲಾಗಿದೆ.