National

ಯುದ್ಧಗ್ರಸ್ತ ಉಕ್ರೇನ್‌: ಇಂದು 3 ಸಾವಿರ ಭಾರತೀಯರ ಏರ್ ಲಿಫ್ಟ್, ಇಲ್ಲಿವರೆಗೆ 13,700 ಭಾರತೀಯರು ಸ್ವದೇಶಕ್ಕೆ

ನವದೆಹಲಿ: ‘ಆಪರೇಷನ್ ಗಂಗಾ’ ಯೋಜನೆ ಅಡಿಯಲ್ಲಿ, ಯುದ್ಧಗ್ರಸ್ತ ಉಕ್ರೇನ್‌ ಹಾಗು ನೆರೆಯ ದೇಶಗಳಿಂದ 15 ವಿಶೇಷ ವಿಮಾನಗಳ ಮೂಲಕ ಇಂದು (ಶನಿವಾರ) ಸುಮಾರು 3000 ಭಾರತೀಯರನ್ನು ಏರ್ ಲಿಫ್ಟ ಮಾಡಲಾಗಿದೆ. 3000 ಭಾರತೀಯರನ್ನು 12 ವಿಶೇಷ ನಾಗರಿಕ ಮತ್ತು ಮೂರು ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ.

ರಷ್ಯಾ ಉಕ್ರೇನ್ ಮೇಲೆ ಧಾಳಿಗೈದ ನಂತರ ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ ಇದುವರೆಗೆ 13,700 ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ಮಾತ್ರವಲ್ಲದೆ ನೆರೆಹೊರೆಯ ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ಕೂಡ ಭಾರತೀಯ ಪ್ರಜೆಗಳನ್ನು ಮರಳಿ ಸ್ವದೇಶಕ್ಕೆ ಏರ್ ಲಿಫ್ಟ್ ಮಾಡಲಾಗಿದೆ.

ಭಾನುವಾರ 11 ವಿಶೇಷ ವಿಮಾನಗಳ ಮೂಲಕ ಬುಡಾಪೆಸ್ಟ್, ಕೊಸಿಸ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್ ನಿಂದ 2000ಕ್ಕೂ ಮಿಕ್ಕಿ ಭಾರತೀಯರನ್ನು ಏರ್ ಲಿಫ್ಟ್ ಮಾಡುವ ನಿರೀಕ್ಷೆಯಿದೆ.

Exit mobile version