National

ಲೋಕಸಭೆ ಚುನಾವಣೆ 2024: ಜನಾಭಿಪ್ರಾಯ ಸಂಗ್ರಹದಲ್ಲಿ ಮೋದಿಗೆ ಹ್ಯಾಟ್ರಿಕ್, ವಿಪಕ್ಷ ಇಂಡಿಯಾ ಬಣ 163 ಸ್ಥಾನಗಳಿಗೆ ಸೀಮಿತ

ನವದೆಹಲಿ: ಸಮೀಕ್ಷೆಯಂತೆ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು 2024ರ ಲೋಕಸಭೆ ಚುನಾವಣೆಯಲ್ಲಿ ಪಡೆಯುವ ಸೂಚನೆ ಸಿಕ್ಕಿದ್ದು, ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ಸಮೀಕ್ಷೆ ನಿಜವಾದರೆ ಮೂರು ನೇರ ಅವಧಿಗೆ ಅಧಿಕಾರದಲ್ಲಿ ಸೇವೆ ಸಲ್ಲಿಸಿದ ಹಿರಿಮೆಯನ್ನು ಹೊಂದಿರುವ ಭಾರತದ ಮೊದಲ ಮತ್ತು ಏಕೈಕ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಮನಾಗಿ ಮೋದಿಯನ್ನು ಇರಿಸುತ್ತದೆ.

ಸಮೀಕ್ಷೆಯ ಪ್ರಕಾರ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 323 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ ಮತ್ತು 28 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ I.N.D.I.A ಬಣವು 543 ಸದಸ್ಯರ ಸಂಸತ್ತಿನ ಕೆಳಮನೆಯಲ್ಲಿ 163 ಸ್ಥಾನಗಳಲ್ಲಿ ಜಯಗಳಿಸಬಹುದು ಹಗಲು ಮೈತ್ರಿಕೂಟದ ನಾಯಕನಾಗಿ ಸ್ವತಃ ಸ್ಥಾನ ಪಡೆದಿರುವ ಕಾಂಗ್ರೆಸ್ 52-72 ಸ್ಥಾನಗಳಿಗೆ ಸೀಮಿತವಾಗುವ ನಿರೀಕ್ಷೆಯಿದೆ.

2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 353 ಸ್ಥಾನಗಳನ್ನು ಗೆದ್ದು ಪ್ರಮುಖ ಪಕ್ಷ ಬಿಜೆಪಿ 303 ಸ್ಥಾನಗಳನ್ನು ತನ್ನದಾಗಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ 52 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದು 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ 44 ಸ್ಥಾನಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.

ಈ ಬಾರಿಯ ಸಮೀಕ್ಷೆಯಂತೆ ಇತರ ಪಕ್ಷಗಳಾದ ವೈಎಸ್‌ಆರ್‌ಸಿಪಿ 24-25 ಸ್ಥಾನಗಳು, ತೃಣಮೂಲ ಕಾಂಗ್ರೆಸ್‌ಗೆ 20-24 ಸ್ಥಾನಗಳು, ಬಿಜು ಜನತಾ ದಳಕ್ಕೆ 13-15 ಸ್ಥಾನಗಳು, ಭಾರತ್ ರಾಷ್ಟ್ರ ಸಮಿತಿಗೆ 3-5 ಸ್ಥಾನಗಳು, ಆಮ್ ಆದ್ಮಿಗೆ 4-7 ಸ್ಥಾನಗಳು ಹಾಗು ಇತರರಿಗೆ 66-76 ಸ್ಥಾನಗಳು ಸಿಗುವ ಸಾಧ್ಯತೆಯಿದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
 https://chat.whatsapp.com/CMUDdTXoFVn7atm3zHYGrd

Exit mobile version