National

31 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ: 5 ದೋಣಿಗಳು ಸೀಜ್

ಇಸ್ಲಾಮಾಬಾದ್: ಪಾಕಿಸ್ತಾನದ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕ್ ರಕ್ಷಣಾ ಅಧಿಕಾರಿಗಳು 31 ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ ಮತ್ತು ಅವರ ಐದು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ದಿನ ಪಾಕಿಸ್ತಾನದ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದಾಗ ಒಳನುಗ್ಗಿದ ದೋಣಿಗಳನ್ನು ಸೆರೆಹಿಡಿಯಲಾಗಿದೆ ಎಂದು ಪಾಕಿಸ್ತಾನ ಸಮುದ್ರ ಭದ್ರತಾ ಸಂಸ್ಥೆ ತಿಳಿಸಿದೆ. ಹೆಚ್ಚಿನ ಕಾನೂನು ಪ್ರಕ್ರಿಯೆಗಳಿಗಾಗಿ ದೋಣಿಗಳನ್ನು ಕರಾಚಿಗೆ ತೆಗೆದುಕೊಂಡು ಹೋಗಲಾಗಿದೆ.

ಪಾಕಿಸ್ತಾನ ಮತ್ತು ಭಾರತವು ಕೆಲವು ಕಡೆಗಳಲ್ಲಿ ಕಡಲ ಗಡಿಯನ್ನು ಉಲ್ಲಂಘಿಸಿದ್ದಕ್ಕಾಗಿ ಎರಡೂ ಕಡೆಯ ಮೀನುಗಾರರನ್ನು ನಿಯಮಿತವಾಗಿ ಬಂಧಿಸುತ್ತದೆ. ಉಭಯ ದೇಶಗಳ ಮಧ್ಯೆ ಪರಸ್ಪರರ ಮೀನುಗಾರರ ಬಂಧನ ಸಾಮಾನ್ಯವಾಗಿದ್ದು ವಿಚಾರಣೆ ನಂತರ ಜೈಲು ಶಿಕ್ಷೆ ಮುಗಿದ ಮೇಲೆ ಆಯಾ ದೇಶಕ್ಕೆ ಹಸ್ತಾಂತರಿಸಲಾಗುತ್ತದೆ.

Exit mobile version