
ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತನ್ನ ಸ್ವಪಕ್ಷೀಯರಿಂದಲೇ ಬೆಂಬಲವನ್ನು ಕಳೆದುಕೊಂಡಿದ್ದು, ಪಾಕ್ ಸೇನೆ ಕೂಡ ಇಮ್ರಾನ್ ಜತೆ ಮುನಿಸಿಕೊಂಡಿದೆ.
ಪಾಕ್ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಖೈಬರ್ ಪಖ್ತುಂಕ್ವಾಯನ್ನು ಕೇಂದ್ರ ನಿರ್ಲಕ್ಷಿಸುತ್ತಿರುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು ಸ್ವಪಕ್ಷದ ವಿರೋಧ ಎದುರಿಸುತ್ತಿದ್ದಾರೆ. ಜತೆಗೆ ಆಂತರಿಕ ಭದ್ರತೆಯನ್ನು ನಿರ್ವಹಣೆ ವಿಷಯದಲ್ಲಿ ಇಮ್ರಾನ್ ಖಾನ್ ಅವರ ವಿರುದ್ಧ ಸೇನೆ ಕೂಡ ಅಸಮಾಧಾನ ಹೊಂದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪಾಕ್ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಪಾಕ್ ಲೋಕಸಭೆಯಲ್ಲಿ 80ಕ್ಕೂ ಅಧಿಕ ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ. ಮುಂದೆ ಪರ್ವೇಜ್ ಖಟ್ಟಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯವನ್ನು ನಿರ್ಲಕ್ಷ್ಯ ಮಾಡಿದರೆ, ಆ ಪ್ರಾಂತ್ಯದ ಜನರು ಪಿಟಿಐ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಪರ್ವೇಜ್ ಖಟ್ಟಕ್ ಪಾಕ್ ಪ್ರಧಾನಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ ಎನ್ನಲಾಗಿದೆ.












































