
ಹೊಸದಿಲ್ಲಿ: ಪಾಕಿಸ್ತಾನದ ಪ್ರದೇಶದ ಮೇಲೆ ಇತ್ತೀಚೆಗೆ ಇರಾನ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿರುವ ಶಂಕಿತ ಬಲೂಚ್ ಪ್ರತ್ಯೇಕತಾವಾದಿ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ಮೇಲೆ ಗಡಿಯಾಚೆಗಿನ ದಾಳಿಯಲ್ಲಿ ತೊಡಗಿರುವ ಬಲೂಚ್ ಉಗ್ರಗಾಮಿಗಳ ಸ್ಥಳಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನೊಳಗೆ ಹಲವಾರು ದಾಳಿಗಳನ್ನು ನಡೆಸಿರುವ, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಸುನ್ನಿ ಉಗ್ರಗಾಮಿ ಗುಂಪು ಜೈಶ್ ಅಲ್-ಅದ್ಲ್‌ನ ನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದ್ದೇವೆ ಎಂದು ಇರಾನ್ ಹೇಳಿಕೊಂಡ ಬಳಿಕ ಪಾಕಿಸ್ತಾನದಿಂದ ಪ್ರತಿ ಧಾಳಿ ಮಾಡಲಾಗಿದೆ.
ಪಾಕ್ ಯಾವುದೇ ಉಗ್ರ ನೆಲೆ ಮೇಲೆ ಧಾಳಿ ಮಾಡಿಲ್ಲ. ಪಾಕಿಸ್ತಾನದ ಧಾಳಿಯಿಂದ ಇರಾನ್ ನಾಗರಿಕರಾದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ. ಈ ಘಟನೆಯು ಎರಡು ನೆರೆಹೊರೆ ದೇಶಗಳ ಮಧ್ಯೆ ರಾಜತಾಂತ್ರಿಕ ಕಲಹವನ್ನು ಹುಟ್ಟುಹಾಕಿದೆ.












































