HomeNationalಪಾಕಿಸ್ತಾನದ ಪ್ರಧಾನಿ ಹಾಗೂ ಸೇನಾಮುಖ್ಯಸ್ಥರ ನಡುವಿನ ತಿಕ್ಕಾಟ ತಾರಕಕ್ಕೆ

ಪಾಕಿಸ್ತಾನದ ಪ್ರಧಾನಿ ಹಾಗೂ ಸೇನಾಮುಖ್ಯಸ್ಥರ ನಡುವಿನ ತಿಕ್ಕಾಟ ತಾರಕಕ್ಕೆ

ಇಸ್ಲಾಮಾಬಾದ್: ಸೇನೆಯ ಬೆಂಬಲವನ್ನು ಪಡೆದುಕೊಂಡು ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯನ್ನು ಏರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇತ್ತೀಚೆಗೆ ಸೇನೆ ಹಾಗೂ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಅಲ್ಲಿನ ಐಎಸ್ಐ ಮುಖ್ಯಸ್ಥ ಹಾಗೂ ಇಮ್ರಾನ್ ನಡುವೆ ಇರುವ ನಿಕಟ ಸಂಬಂಧ.

ಇಮ್ರಾನ್ ಖಾನ್ ಅವರಿಗೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಐಎಸ್ಐ ಮುಖ್ಯಸ್ಥರು ಸಹಾಯವನ್ನು ಮಾಡಿದ್ದರು. ಹಾಗಾಗಿ ಇಮ್ರಾನ್ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಇದೇ ಐ.ಎಸ್.ಐ ಮುಖ್ಯಸ್ಥರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ಮಾಡುವ ತಂತ್ರವನ್ನು ಕೂಡ ಇಮ್ರಾನ್ ಖಾನ್ ಹೆಣೆದಿದ್ದಾರೆ. ಆದರೆ ಇದು ಸೇನೆಗೆ ಇಷ್ಟವಿಲ್ಲ ಎಂದು ತಿಳಿದುಬಂದಿದೆ.

ತಮ್ಮೊಂದಿಗೆ ನಿಕಟ ಸಂಬಂಧ ಹೊಂದಿರುವವರನ್ನು ಸೇನೆಯ ಮುಖ್ಯಸ್ಥರನ್ನಾಗಿ ಮಾಡಿದರೆ ಮುಂದಿನ ಚುನಾವಣೆಯ ವೇಳೆಗೆ ತಮಗೆ ಸಹಕಾರಿಯಾಗಲಿದೆ ಎಂಬುದು ಇಮ್ರಾನ್ ಖಾನ್ ಲೆಕ್ಕಾಚಾರ . ಆದರೆ ಈಗಿರುವ ಸೇನಾ ಮುಖ್ಯಸ್ಥರಾದ ಜನರಲ್ ಬಾಜ್ವ ಇಂಥ ಒಂದು ಯೋಜನೆಗೆ ಅಡ್ಡಿಯಾಗಿದ್ದಾರೆ. ಇಬ್ಬರ ಮೇಲಾಟದ ಪ್ರಯತ್ನ ಇದೀಗ ತಿಕ್ಕಾಟಕ್ಕೆ ಕಾರಣವಾಗಿದ್ದು ಪಾಕ್ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

ಈ ಮಧ್ಯೆ ಐ.ಎಸ್.ಐ ಗೆ ನೂತನ ಮುಖ್ಯಸ್ಥರ ಆಯ್ಕೆಯಲ್ಲಿ ಸೇನಾ ಮುಖ್ಯಸ್ಥರ ಕೈ ಮೇಲಾಗಿದೆ. ಸೇನಾ ಮುಖ್ಯಸ್ಥ ಬಾಜ್ವಾ ಆಯ್ಕೆಯ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರನ್ನು ಐ.ಎಸ್.ಐ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥರೇ ಪರಮೋಚ್ಚ ಅಧಿಕಾರ ಹೊಂದಿರುವ ವ್ಯಕ್ತಿ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments