National

ಈ ವರ್ಷ ಪಾಕಿಸ್ತಾನ ಭಾರತಕ್ಕೆ ಹಾರಿಸಿದ ಡ್ರೋನ್‌ಗಳ ಸಂಖ್ಯೆ ಬರೋಬ್ಬರಿ 100..!!

ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ತನ್ನ ಮಸಲತ್ತನ್ನು ಮುಂದುವರಿದಿದೆ. ನಿರಂತರವಾಗಿ ಪಾಕ್‌ನ ಡ್ರೋಣಗಳು ಭಾರತದ ಗಡಿಯೊಳಗೆ ಬರುತ್ತಿವೆ. ಕಳೆದ ಒಂದು ವಾರದಲ್ಲಿಯೇ ಕನಿಷ್ಠ ಮೂರಕ್ಕಿಂತ ಹೆಚ್ಚು ಪಾಕ್‌ ಡ್ರೋಣ್‌ಗಳನ್ನು ಭಾರತ ಹೊಡೆದುರುಳಿಸಿದೆ. ಅತ್ತ ಚೀನಾ ಎಲ್ಲ ದೇಶದ ಮೇಲೆ ಬಲೂನು ಹಾರಿಸುತ್ತಾ ಬೇಹುಗಾರಿಕೆ ಮಾಡುತ್ತಿದ್ದರೆ, ಇತ್ತ ಪಾಕಿಸ್ತಾನ ಡ್ರೋನ್‌ ಮೂಲಕ ತನ್ನ ಗುರಿಯನ್ನು ಸಾಧಿಸಲು ಮುಂದಾಗಿದೆ. ಹಾಗಾದ್ರೆ ಭಾರತದ ಮೇಲೆ ಪಾಕಿಸ್ತಾನ ಡ್ರೋಣಾಸ್ತ್ರವನ್ನು ಪ್ರಯೋಗಿಸುತ್ತಿರುವುದು ಏಕೆ? ಅಷ್ಟಕ್ಕೂ ಡ್ರೋಣ್‌ನಲ್ಲಿ ಏನಿರುತ್ತೆ? ಇದರಿಂದ ಭಾರತಕ್ಕೆ ಅಪಾಯ ಏನು? ಪಾಕ್‌ನ ತಂತ್ರಕ್ಕೆ ಭಾರತದ ಪ್ರತಿತಂತ್ರ ಏನು? ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ.

ಭಾರತದೊಳಗೆ ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಪಾಕಿಸ್ತಾನದ 100 ಡ್ರೋನ್ ಗಳನ್ನು  ಹೊಡೆದುರುಳಿಸಲಾಗಿದೆ ಅಥವಾ ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಮಂಗಳವಾರ ಮಾಹಿತಿ ನೀಡಿದೆ.  ಭಾರತದೊಳಗೆ ಡ್ರಗ್ಸ್ ಮತ್ತು ಇತರ ಮಾದಕ ವಸ್ತುಗಳ ಸಾಗಣೆಯನ್ನು ಮೋಸದಿಂದ ಕಳುಹಿಸುವುದಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ‘ತ್ರಿಮುಖ ತಂತ್ರ’ವನ್ನು ರೂಪಿಸಿರುವುದಾಗಿ ತಿಳಿಸಿದೆ.

ಡ್ರೋನ್‌ಗಳ ಮೂಲಕ ಮಾದಕವಸ್ತು ಕಳ್ಳಸಾಗಣೆಗೆ ಪ್ರಯತ್ನಿಸುವವರನ್ನು ಯಶಸ್ವಿಯಾಗಿ ಬಂಧಿಸಿರುವುದಾಗಿ ಬಿಎಸ್ ಎಫ್ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮೂಲಕ ಬಿಎಸ್ ಎಫ್ ಪಂಜಾಬ್ ಫ್ರಾಂಟಿಯರ್, ಮಾಹಿತಿ ಹಂಚಿಕೊಂಡಿದೆ.

Exit mobile version