HomeNationalಗುಜರಾತ್ ಚುನಾವಣೆಯಲ್ಲಿ ಈ ಬಾರಿ ಪಾಕ್ ಹಿಂದೂ ನಿರಾಶ್ರಿತರಿಂದ ಮತದಾನ

ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಪಾಕ್ ಹಿಂದೂ ನಿರಾಶ್ರಿತರಿಂದ ಮತದಾನ

ಗಾಂಧಿನಗರ : ಐದು ವರ್ಷಗಳಿಂದ ಹಾಗು ಅದಕ್ಕಿಂತ ಹೆಚ್ಚು ಗುಜರಾತ್ ನಲ್ಲಿ ನಿರಾಶ್ರಿತರಾಗಿ ವಾಸವಾಗಿದ್ದ ಸಾವಿರಾರು ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವ ನೀಡಲಾಗಿದೆ. ಈ ಮೂಲಕ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕ್ ನ ನಿರಾಶ್ರಿತ ಹಿಂದೂಗಳು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.

2016ರಿಂದ ಪಾಕಿಸ್ತಾನದಿಂದ ಗುಜರಾತ್ ಗೆ ವಲಸೆ ಬಂದ ಒಟ್ಟು 1,032 ಮಂದಿ ಹಿಂದೂಗಳಿಗೆ ಅಹಮದಾಬಾದ್ ಡಿಸಿ ಕಚೇರಿಯಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಅಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ, ಕೊಲೆ, ಅತ್ಯಾಚಾರದಿಂದ ನಲುಗಿ ಹೋಗಿದ್ದ ಹಿಂದೂ ಕುಟುಂಬಗಳು ಪಾಕ್ ನಿಂದ ಓಡಿ ಬಂದು ಭಾರತದಲ್ಲಿ ಆಶ್ರಯ ಕೊಡುವಂತೆ ವಿನಂತಿಸಿದ್ದವು. ಇದೀಗ ಭಾರತೀಯ ಪೌರತ್ವದೊಂದಿಗೆ ಮತದಾನದ ಹಕ್ಕು ಕೂಡ ದೊರೆತಿದ್ದು ಗುಜರಾತ್ ಚುನಾವಣಾ ಫಲಿತಾಂಶದ ಮೇಲೆ ನಿರಾಶ್ರಿತ ಹಿಂದೂಗಳ ಮತಗಳ ಪ್ರಭಾವದ ಬಗ್ಗೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಭಾರತದ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯದವರಿಗೆ ಭಾರತೀಯ ಪೌರತ್ವವನ್ನು ನೀಡಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆ ಅನುಮತಿ ನೀಡುವ ಪ್ರಕ್ರಿಯೆ ಅಂತಿಮಗೊಂಡ ನಂತರ ಈ ನಿರಾಶ್ರಿತರು ಪೌರತ್ವ ಪಡೆಯಬಹುದಾಗಿದೆ.

89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆಯಲಿದ್ದು, 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಮತ ಎಣಿಕೆ ನಡೆಯಲಿದೆ. 2022 ರ ಗುಜರಾತ್ ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತೀವ್ರ ಸಿದ್ಧತೆ ನಡೆಸಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ ತನ್ನ ಸರ್ಕಾರವನ್ನು ಉಳಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ 27 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸಿದೆ. ಆದರೆ ಈ ಬಾರಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ಸಿಗಿಂತ ಆಮ್ ಆದ್ಮಿ ಪಕ್ಷ ಪೈಪೋಟಿ ನೀಡುವ ಸಾಧ್ಯತೆಗಳು ಗೋಚರಿಸಿದ್ದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments