
ಮಥುರಾ: ಹಿಂದೂ ದೇಗುಲ ಕೆಡವಿ ಜ್ಞಾನವಾಪಿ ಮಸೀದಿ ನಿರ್ಮಾಣ ಮಾಡಿದುದರ ಬಗ್ಗೆ ಮುಂದುವರೆದಿರುವಂತೆಯೇ ಕೃಷ್ಣ ಜನ್ಮ ಭೂಮಿ ಮಥುರಾ ದೇವಾಲಯದ ಪಟ್ಟಣದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿ ನಮಾಜ್ ಅನ್ನು ನಿಲ್ಲಿಸಬೇಕೆಂದು ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಒಂದು ವಿಭಾಗವು ಒತ್ತಾಯಿಸಿದೆ.
ಈ ಕೂಡಲೇ ಶಾಹಿ ಈದ್ಗಾ ಮಸೀದಿಗೆ ನಮಾಜ್ ಮಾಡಲು ಬರುವುದನ್ನು ನಿಷೇಧಿಸಬೇಕು ಎಂಬುದು ಅವರ ಮನವಿಯಾಗಿತ್ತು. ಶಾಹಿ ಈದ್ಗಾ ಮಸೀದಿಯು ಕೃಷ್ಣನ ಜನ್ಮಸ್ಥಳವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮಸೀದಿಯ ಮೊದಲು ಸ್ಥಳದಲ್ಲಿ ದೇವಾಲಯವಿತ್ತು. ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ಶೈಲೇಂದ್ರ ಸಿಂಗ್, “ಮಸೀದಿಯ ಈ ರಚನೆಯನ್ನು ಹಿಂದೂ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಇದು ದೇವಾಲಯವಾಗಿದೆ ಮತ್ತು ಈ ರಚನೆಯ ಮೇಲೆ ಮಸೀದಿಯಾಗಿರುವುದರಲ್ಲಿ ಯಾವುದೇ ಅರ್ಹತೆ ಇಲ್ಲ,” ಎಂದು ಹೇಳಿದರು.
ಈ ಹಿಂದೆಯೂ ವಿವಿಧ ಹಿಂದುತ್ವ ಸಂಘಟನೆಗಳು ಮಥುರಾ ನ್ಯಾಯಾಲಯದಲ್ಲಿ ಮಸೀದಿಯನ್ನು ತೆಗೆಯುವಂತೆ ಒತ್ತಾಯಿಸಿ 10 ಅರ್ಜಿಗಳನ್ನು ಸಲ್ಲಿಸಿದ್ದವು. ಈ ಮಸೀದಿಯ ಪಕ್ಕದಲ್ಲಿ ಕೃಷ್ಣ ದೇವಸ್ಥಾನವೂ ಇದೆ. ಕತ್ರ ಕೇಶವ್ ದೇವ್ ದೇವಸ್ಥಾನ. ಹಿಂದುತ್ವ ಸಂಘಟನೆಗಳು ಮಸೀದಿಯ ಪ್ರದೇಶವು ಮೊದಲು ಕೇಶವ್ ದೇವ್ ದೇವಸ್ಥಾನವಾಗಿತ್ತು ಎಂದು ಹೇಳಿಕೊಂಡಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕೃಷ್ಣ ದೇವಾಲಯದ ಒಂದು ಭಾಗವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಹಿಂದುತ್ವ ಸಂಘಟನೆಗಳು ಹಿಂದಿನಿಂದಲೂ ಹೇಳಿಕೊಂಡು ಬಂದಿವೆ.