HomeNationalವಿಮಾನ ದುರಂತದಲ್ಲಿ ಇಬ್ಬರು ಹೆಣ್ಮಕ್ಕಳ ಜೊತೆ ಖ್ಯಾತ ನಟ ಸಾವು

ವಿಮಾನ ದುರಂತದಲ್ಲಿ ಇಬ್ಬರು ಹೆಣ್ಮಕ್ಕಳ ಜೊತೆ ಖ್ಯಾತ ನಟ ಸಾವು

ಈಸ್ಟರ್ನ್ ಕೆರಿಬ್ಬಿಯನ್: ಜರ್ಮನ್ ಮೂಲದ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಅವರು ವಿಮಾನ ಅಪಘಾತದಲ್ಲಿ  ಮೃತಪಟ್ಟಿದ್ದಾರೆ. ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಖ್ಯಾತ ನಟ ಮೃತಪಟ್ಟಿದ್ದಾರೆ. ಅವರ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕೆರಿಬಿಯನ್ ಸಮುದ್ರಕ್ಕೆ ಬಿದ್ದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಜಾರ್ಜ್ ಕ್ಲೂನಿ ಅವರೊಂದಿಗೆ ದಿ ಗುಡ್ ಜರ್ಮನ್ ಮತ್ತು 2008 ರಲ್ಲಿ ಆಕ್ಷನ್-ಕಾಮಿಡಿ ಸ್ಪೀಡ್ ರೇಸರ್ ನಲ್ಲಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡ ಆಲಿವರ್ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಆಲಿವರ್ 51 ವರ್ಷದವರಾಗಿದ್ದು ಅವರು ತನ್ನ ಪುತ್ರಿಯರಾದ ಮದಿತಾ 10, ಮತ್ತು ಅನ್ನಿಕ್ 12, ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಅವರೊಂದಿಗೆ ನಿಧನರಾದರು.

ಗುರುವಾರ ಜನವರಿ 4ರಂದು ಖಾಸಗಿ ಒಡೆತನದ ವಿಮಾನದಲ್ಲಿ ತನ್ನ ಹೆಣ್ಣು ಮಕ್ಕಳ ಜೊತೆಗೇ ಮೃತಪಟ್ಟಿದ್ದಾರೆ. ಮೀನುಗಾರರು, ಮುಳುಗುಗಾರರು ಮತ್ತು ಕೋಸ್ಟ್ ಗಾರ್ಡ್ ತಂಡ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದು ನಾಲ್ಕು ಮೃತದೇಹಗಳು ಪತ್ತೆಯಾಗಿವೆ.

RELATED ARTICLES

ಪ್ರಮುಖ ಸುದ್ದಿಗಳು

Recent Comments